ಘಜ್ನಿ, ಜ.22- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಅವ್ಯಾಹತವಾಗಿ ಮುಂದುವರಿದಿದೆ. ಪೂರ್ವ ಆಫ್ಘಾನಿಸ್ತಾನದ ವರ್ದಿಕ್ ಪ್ರಾಂತ್ಯದಲ್ಲಿನ ಸರ್ಕಾರಿ ಗುಪ್ತಚರ ನೆಲೆಯೊಂದರ ಮೇಲೆ ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ ಪೊಲೀಸರು ಮತ್ತು ಯೋಧರೂ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಹಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಈ ಪ್ರದೇಶದಲ್ಲಿ ನಿನ್ನೆ ಸೇನಾ ಶಿಬಿರ ಮತ್ತು ಪೊಲೀಸ್ ತರಬೇತಿ ಶಾಲೆ ಮೇಲೆ ತಾಲಿಬಾನ್ ಉಗ್ರರು ಕಾರ್‍ಬಾಂಬ್ ಸಿಡಿಸಿ ನಂತರ ಗುಂಡಿನ ಮಳೆಗರೆದಿದ್ದರು.
ಈ ಪ್ರದೇಶದಲ್ಲಿ ಈವರೆಗೆ 65 ಮೃತದೇಹಗಳು ಪತ್ತೆಯಾಗಿವೆ. ಗುಂಡಿನ ಕಾಳಗದಲ್ಲಿ ಕೆಲ ತಾಲಿಬಾನ್ ಉಗ್ರರೂ ಹತರಾಗಿದ್ದಾರೆ.