ನಗರದಲ್ಲಿ ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಿದ ಯಮಹಾ ಸಂಸ್ಥೆ

ಬೆಂಗಳೂರು, ಜ.20- ಭಾರತೀಯ ಯಮಯಾ ಮೋಟಾರ್ಸಂಸ್ಥೆ (ಐವೈಎಂ)ಯು ಹೊಸ ಮಾದರಿಯ ಅತ್ಯಾಧುನಿಕ ಎಬಿಎಸ್ ತಂತ್ರಜ್ಞಾನ ಹೊಂದಿರುವ 149 ಸಿಸಿ ಎಫ್‍ಜೆಡ್-ಎಫ್‍ಐ ಅಂಡ್ ಎಫ್‍ಜೆಡ್‍ಎಸ್- ಎಫ್ ಐ ಬೈಕ್‍ಗಳನ್ನು ನಗರದಲ್ಲಿಂದು ಬಿಡುಗಡೆಯಾಯಿತು.

ಹೊಸ 3ನೇ ತಲೆಮಾರಿನ ಎಫ್‍ಜೆಡ್ ಮಾದರಿಗಳು ಹೊಸವೈಶಿಷ್ಟ್ಯಗಳೊಂದಿಗೆ, ಕಣ್ ಸೆಳೆಯುವ ಸ್ಟೈಲಿಷ್ ಮತ್ತು ಸ್ಪೋರ್ಟಿವ್ಲುಕ್‍ನಲ್ಲಿ ಕಂಗೊಳಿಸುತ್ತಿವೆ.
ಮೊದಲಿನಿಂದಲೂ ಮಾರುಕಟ್ಟೆಯಲ್ಲಿ ಛಾಪು ಒತ್ತಿರುವ ಈ ಬೈಕ್‍ನ ಮೂಲ ವಿನ್ಯಾಸವನ್ನು ಕಾಪಾಡಿಕೊಂಡೆ ಹೊಸ ಬೈಕ್‍ಗಳಿಗೆಇನ್ನಷ್ಟು ಹೆಚ್ಚಿನ ಸ್ಟೈಲ್, ತಂತ್ರಜ್ಞಾನ, ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹೊಸ ಬೈಕ್‍ಗಳಲ್ಲಿ ಅಳವಡಿಸಲಾಗಿರುವ ಬ್ಲೂ ಕೋರ್ ತಂತ್ರಜ್ಞಾನವು149 ಎಂಜಿನ್‍ನ ಸಾಮಥ್ರ್ಯವನ್ನು ಹೆಚ್ಚು ಮಾಡಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್‍ನ ಛೇರ್ಮನ್ ಮೊತೊಫುಮಿ ಸಿತಾರಾ ತಿಳಿಸಿದರು.

ಕಳೆದ ವರ್ಷ ಬಿಡುಗಡೆ ಮಾಡಿದ್ದ ವೈಜೆಡ್‍ಎಫ್-ಆರ್15ಗೆ ದೊರೆತ ಅಭೂತಪೂರ್ವ ಬೆಂಬಲದಿಂದ ಉತ್ಸಾಗೊಂಡು ಈ ಬೈಕ್‍ನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ