ಮುಂಬೈ,ಜ.20- ನೀರವ್ ಮೋದಿ 14 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನುಕೇಂದ್ರ ಸರ್ಕಾರ ಸೇವೆಯಿಂದ ವಜಾ ಮಾಡಿದೆ.
ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಕೆ.ವೀರ ಬ್ರಹ್ಮಾಜಿರಾವ್ ಹಾಗೂ ಸಂಜೀವ್ ಶರಣ್ ವಜಾಗೊಂಡಿರುವವರು.
ಇವರಿಬ್ಬರು ಶೀಘ್ರದಲ್ಲಿಯೇ ನಿವೃತ್ತಿಯಾಗಲಿದ್ದರು. ಈ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿರುವ ಕೇಂದ್ರ, ಹಗರಣದ ಸಂದರ್ಭದಲ್ಲಿಕಾರ್ಯಾ ನಿರ್ವಹಕ ನಿರ್ದೇಶಕರಾಗಿದ್ದ ನೀವು ಬ್ಯಾಂಕ್ನ ಕಾರ್ಯದ ಬಗ್ಗೆ ನಿಯಂತ್ರಣ ಸಾಧಿಸದ ಕಾರಣ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.