ಟ್ಲಾಹ್ಯೂಲಿಪನ್(ಮೆಕ್ಸಿಕೋ), ಜ.20- ಮೆಕ್ಸಿಕೋ ದಟ್ಲಾ ಹ್ಯುಲಿಪನ್ ಪಟ್ಟಣದಲ್ಲಿ ಅಕ್ರಮ ತೈಲ ಕೊಳವೆ ಮಾರ್ಗದಲ್ಲಿ ನಿನ್ನೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಸ್ಫೋಟಗೊಂಡು ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 76ಕ್ಕೇರಿದೆ. ಈ ಭೀಕರ ದುರಂತದಲ್ಲಿಅನೇಕರು ಸುಟ್ಟು ಕರಕಲಾಗಿ, 70ಕ್ಕೂ ಹೆಚ್ಚು ಜನರು ತೀವ್ರಗಾಯಗೊಂಡಿರುವ ಘಟನೆ ಮೆಕ್ಸಿಕೋದ ಹಿಡಾಲ್ಗೋ ಪ್ರಾಂತ್ಯದಲ್ಲಿ ನಿನ್ನೆ ಸಂಭವಿಸಿತ್ತು.
ಪೈಪ್ಲೈನ್ನಲ್ಲಿ ಸೋರಿಕೆಯಾಗುತ್ತಿದ್ದ ಇಂಧನವನ್ನು ತುಂಬಿಕೊಳ್ಳಲು ಸ್ಥಳೀಯ ಜನರ ಗುಂಪು ಅಲ್ಲಿ ಸೇರಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಭಾರೀ ಸ್ಫೋಟವಾಯಿತು. ಈ ದುರ್ಘಟನೆಯಲ್ಲಿ ಈವರೆಗೆ 76 ಮಂದಿ ಮೃತಪಟ್ಟಿದ್ದಾರೆ ಎಂದು ಹಿಡಾಲ್ಗೋ ರಾಜ್ಯದ ಗೌರ್ನರ್ ಓಮರ್ ಫಯಾದ್ ಹೇಳಿದ್ದಾರೆ.
ಈ ದುರ್ಘಟನೆಯಲ್ಲಿಇತರ 70ಕ್ಕೂ ಹೆಚ್ಚು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಗೌರ್ನರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೊಡ್ಡ ಕೊಳೆವೆ ಮಾರ್ಗದಲ್ಲಿತೈಲ ಸೋರಿಕೆಯಾಗುತ್ತಿದ್ದ ಸುದ್ದಿ ತಿಳಿದು ಬಕೆಟ್ಗಳು ಮತ್ತು ಕ್ಯಾನ್ಗಳೊಂದಿಗೆ ಸ್ಥಳೀಯ ನಿವಾಸಿಗಳ ಗುಂಪೋ0ದು ಅಲ್ಲಿ ಜಮಾಯಿಸಿತ್ತು. ಇದೇ ಸಂದರ್ಭದಲ್ಲಿಗ್ಯಾಸೋಲೈನ್ ಪೈಪ್ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆಸ್ಫೋಟನೆಯಾಯಿತು. ಆ ಮಾರ್ಗದ ಕೊಳವೆ ಬೆಂಕಿಯ ಜ್ವಾಲೆಗಳೊಂದಿಗೆ ಅಲ್ಲಿದ್ದವರನ್ನು ಆಪೋಶನ ತೆಗೆದುಕೊಂಡಿತು.
ಮೃತರಲ್ಲಿ ಹಲವರುಗುರುತಿಸಲಾಗದಷ್ಟು ಸುಟ್ಟುಕರಕಲಾಗಿದ್ದರೆ, ಇನ್ನು ಕೆಲವರು ಬೂದಿಯಾಗಿದ್ದಾರೆ. ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ವರಲ್ಲಿಇನ್ನೂಅನೇಕರ ಸ್ಥಿತಿ ಚಿಂತಾಜನಕವಾಗಿದೆ.
ಮೆಕ್ಸಿಕೋದಲ್ಲಿಅಕ್ರಮತೈಲ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕುತ್ತಿದ್ದರೂ ಇಂಥ ದುರ್ಘಟನೆಗಳು ಮುಂದುವರಿದಿವೆ. ಕೊಳವೆ ಮಾರ್ಗದಲ್ಲಿತೈಲ ಸೋರಿಕೆ, ಬೆಂಕಿ ದುರಂತ ಮತ್ತು ಸಾವುನೋವಿನ ಘಟನೆಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.