ಬೆಂಗಳೂರು, ಜ.18- ಇಂದಿರಾಕ್ಯಾಂಟಿನ್ ಹಾಗೂ ಶಾಲೆಗಳ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಸುವ ಚಿಂತನೆಗೆ ಸರ್ಕಾರ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಅರಮನೆ ಮೈದಾನದಲ್ಲಿಂದ ಆರಂಭವಾದ ಸಾವಯವ ಮತ್ತು ಸಿರಿಧಾನ್ಯಗಳು-2019ರ ಅಂತಾರಾಷ್ಟ್ರೀಯ ವ್ಯಾಪಾರ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 2-3 ವರ್ಷಗಳಿಂದ ಸರ್ಕಾರದ ವತಿಯಿಂದ ಸಾವಯವ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುತ್ತಿದೆ.ರೈತರಲ್ಲಿ ಕೃಷಿ ಅವಲಂಬನೆ ಮುಂದುವರೆಯುವಂತೆ ಆ ಮೂಲಕ ಪೆÇ್ರೀ ಎಂದರು.
ರಾಜ್ಯ ಸರ್ಕಾರ ಇಸ್ರೇಲ್ ತಂತ್ರಜ್ಞಾನಕ್ಕೆ ಒತ್ತು ನೀಡಿದ್ದು, ಕಳೆದ 20 ವರ್ಷಗಳ ಸರಾಸರಿ ಮಳೆ ಆಧರಿಸಿ ಬೆಳೆಗಳನ್ನು ಬೆಳೆಯಬೇಕಾಗಿದೆ. ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಕೃಷಿಯೂ ಲಾಭದಾಯಕವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರ ಕಡೆಗೆ ರೈತರು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕೃಷಿ ಬಗ್ಗೆ ರೈತರಲ್ಲಿ ನಿರಾಸಕ್ತಿ ಮನೋಭಾವ ಕಂಡು ಬರುತ್ತಿದೆ.ಕಾರಣ ಕೃಷಿ ಲಾಭದಾಯಕವಲ್ಲ ಎಂಬುದು ಅದರ ಹಿಂದಿರುವ ಉದ್ದೇಶ ಇರಬಹುದು.ರೈತರಲ್ಲಿನ ನಕಾರಾತ್ಮಕ ಮನೋಭಾವನೆಯನ್ನು ದೂರ ಮಾಡಲು ಸರ್ಕಾರ ಬದ್ಧವಾಗಿದೆ. ರೈತರ ಅಪೇಕ್ಷೆಯಂತೆ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕೆಂಬ ನಿರೀಕ್ಷೆ ಇದ್ದು, ಇದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಶಿವಶಂಕರರೆಡ್ಡಿ, ಎಂ.ಸಿ.ಮನಗೂಳಿ, ವೆಂಕಟರಾವ್ನಾಡಗೌಡ, ಕೇರಳದ ಕೃಷಿ ಸಚಿವ ಸುಶೀಲ್ಕುಮಾರ್, ಮೇಯರ್ ಗಂಗಾಂಬಿಕೆ, ವಿಧಾನಪರಿಷತ್ನ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಅ.ದೇವೇಗೌಡ, ರಮೇಶ್ಗೌಡ, ಎಂ.ಸಿ.ವೇಣುಗೋಪಾಲ್, ಕೃಷಿ ಇಲಾಖೆ ಕಾರ್ಯದರ್ಶಿ ಮಹೇಶ್ವರ್ರಾವ್ ಮತ್ತಿತರರು ಉಪಸ್ಥಿತರಿದ್ದರು.