ನಾಲ್ವರು ಉಗ್ರರ ಹತ್ಯೆಗೈದ ಸೇನೆ

ನವದೆಹಲಿ: ಗಡಿ ನಿಯಂತ್ರಣಾ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ನಿರಂತರ ದಾಳಿ ನಡೆಸುತ್ತಿದ್ದ ಪಾಕ್ ಸೇನೆಗೆ ತಕ್ಕ ತಿರುಗೇಟು ನೀಡಿರುವ ಭಾರತೀಯ ಸೇನೆ, ನಾಲ್ವರು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದಿದೆ.

ಗಡಿನಿಯಂತ್ರಣ ರೇಖೆಯಲ್ಲಿ ಗಸ್ತು ತಿರುಗುತ್ತಿದ್ದ ಭಾರತ ಸೇನಾಧಿಕಾರಿ ಹಾಗೂ ಯೋಧನನ್ನು ಪಾಕಿಸ್ತಾನಿ ಸೈನಿಕರು ಹತ್ಯೆ ಮಾಡಿದ್ದರು. ಅಲ್ಲದೆ ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಬಳಿ ಭದ್ರತಾ ಪಡೆ ಸಿಬ್ಬಂದಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಭಾರತ ಈಗ ಎರಡು ದಿನಗಳಲ್ಲಿ ನಾಲ್ವರು ಪಾಕ್​ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಭಾರತ ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಪ್ರತಿ ಬಾರಿ ಆಗುವ ಕದನ ವಿರಾಮ ಉಲ್ಲಂಘನೆಗೆ ಭಾರತ ಸೇನೆ ಯೋಗ್ಯ ಪ್ರತ್ಯುತ್ತರ ನೀಡಲಿದೆ ಎಂದು ಸೇನೆ ಅಧಿಕಾರಿ ಲೆಫ್ಟಿನಂಟ್​ ಜನರಲ್ ರಣಬೀರ್​ ಸಿಂಗ್​ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ