ಯೋಧರಿಗೆ ಕಳಪೆ ಆಹಾರ ಪೂರೈಕೆ ಆರೋಪ ಮಾಡಿದ್ದ ತೆಜ್ ಬಹದ್ದೂರ್ ಪುತ್ರ ಆತ್ಮಹತ್ಯೆ

Varta Mitra News

ನವದೆಹಲಿ: ಯೋಧರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ ಫೇಸ್​ಬುಕ್​ನಲ್ಲಿ ವಿಡಿಯೋ ಶೇರ್​ ಮಾಡಿ ವಿವಾದಕ್ಕೀಡಾಗಿದ್ದ ಬಿಎಸ್​ಎಫ್​ ಕಾನ್​ಸ್ಟೆಬಲ್​ ತೇಜ್​ ಬಹದ್ದೂರ್​ ಯಾದವ್​ ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ತೇಜ್​ ಪ್ರತಾಪ್​ ಯಾದವ್​ ಪುತ್ರ ರೋಹಿತ್​ (22) ಹರಿಯಾಣದ ರೇವಾರಿ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಳಗಿನಿಂದ ಲಾಕ್​ ಆಗಿದ್ದ ಕೊಠಡಿಯಲ್ಲಿ ರೋಹಿತ್​ ಮೃತದೇಹ ಪತ್ತೆಯಾಗಿದ್ದು, ಆತನ ಕೈಯಲ್ಲಿ ಪಿಸ್ತೂಲ್​ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರೋಹಿತ್​ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳುತ್ತಿದ್ದಂತೆ ಸ್ಥಳಕ್ಕೆ ತೆರಳಿದೆವು. ಆತನ ದೇಹ ಹಾಸಿಗೆ ಮೇಲಿತ್ತು. ತೇಜ್​ ಬಹದ್ದೂರ್​ ಯಾದವ್​ಗೆ ಈ ವಿಷಯ ತಿಳಿಸಲಾಗಿದೆ. ಸದ್ಯ ಅವರು ಉತ್ತರಪ್ರದೇಶದ ಪ್ರಯಾಗ್​ರಾಜ್​ ಕುಂಭಮೇಳದಲ್ಲಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

son-of-bsf-jawan-who-made-bad-food-videos-found-dead-suicide-suspected

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ