ಲೆಹ್ (ಲಡಾಕ್): 17,500 ಅಡಿ ಜಗತ್ತಿನ ಅತ್ಯಂತ ಎತ್ತರದ ರಸ್ತೆಯ ಮೇಲೆ ಇಂದು ಬೆಳಗ್ಗೆ ಭಾರೀ ಹಿಮಪಾತಕ್ಕೆ ಹಲವು ವಾಹನಗಳು ಸಿಲುಕಿದ ಪರಿಣಾಮ ಮೂವರು ಮೃತಪಟ್ಟು, ಏಳು ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಖರ್ದುಂಗ್ ಲಾ ಪಾಸ್ನಲ್ಲಿ ನಡೆದಿದೆ. ಕಾಣೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಇಲಾಖೆ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆ ಪಾಲ್ಗೊಂಡಿದೆ. ಘಟನೆ ನಡೆದ ಸ್ಥಳ ಲೆಹ್ನಿಂದ 40 ಕಿ.ಮೀ. ದೂರದಲ್ಲಿದೆ.