ಬೆಂಗಳೂರು: ಅತಿಥೇಯ ಕರ್ನಾಟಕ ಮತ್ತು ರಾಜಸ್ಥಾನ ನಡುವಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದ್ದು ಮನೀಷ್ ಪಡೆಗೆ ಗೆಲ್ಲಲು 139 ರನ್‍ಗಳ ಅಗತ್ಯವಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ದಿನದಾಟದ ಪಂದ್ಯದಲ್ಲಿ ರಾಜಸ್ಥಾನ ಕರ್ನಾಟಕ ದಾಳಿಗೆ ತತ್ತರಿಸಿ ಹೋಯ್ತು. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ಆಫ್ ಸ್ಪಿನ್ನರ್ ಕೆ.ಗೌತಮ್ ಅವರ ಮಾರಕ ದಾಳಿಗೆ ತತ್ತರಿಸಿದ ರಾಜಸ್ತಾನ 222 ರನ್‍ಗಳಿಗೆ ಸರ್ವಪತನ ಕಂಡಿತು. ಮನೀಶ್ ಪಡೆಗೆ ಒಟ್ಟು 184 ರನ್‍ಗಳ ಗುರಿ ನೀಡಿದ್ದಾರೆ.
ರಾಜಸ್ತಾನ ಪರ ಚೇತನ್ ಬಿಸ್ಟ್ 33, ಲೊಮ್ರೊರ್ 42, ರಾಬಿನ್ ಬಿಸ್ಟ್ 44
ಸಲ್ಮಾನ್ ಖಾನ್25, ದೀಪಕ್ ಚಹರ್ 22 ರನ್‍ಗಳಿಸಿದ್ರು. ಕರ್ನಾಟಕ ಪರ ಗೌತಮ್ ಕೆ. 4, ಶ್ರೇಯಸ್ ಗೋಪಲ್ 3 ವಿಕೆಟ್ ಪಡೆದು ಮಿಂಚಿದ್ದಾರೆ. ಅಭಿಮಾನ್ಯು ಮಿಥುನ್ 2 ವಿಕೆಟ್ ಪಡೆಯುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದ್ರು.
184 ರನ್‍ಗಳ ಗೆಲುವಿನ ಗುರಿಯನ್ನ ಬೆನ್ನತ್ತಿದ ಕರ್ನಾಟಕ ಚೌಧರಿ ದಾಳಿಗೆ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಸಮರ್ಥ್(16),ನಿಶ್ಚಲ್ (1),ಸಿದ್ದರ್ಥ್ (5) ರನ್‍ಗಳಿಸಿ ಬೇಗನೆ ಪೆವಲಿಯನ್ ಸೇರಿದ್ರು. ದಿನದಾಟದ ಅಂತ್ಯದಲ್ಲಿ ಕರುಣ್ ನಯಾರ್(18) ರೊನಿತ್ ಮೋರೆ ಅಜೇಯ ಐದು ರನ್‍ಗಳಿಸಿ ನಾಲ್ಕನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡ್ರು.ಕರ್ನಾಟಕ ತಂಡಕ್ಕೆ ಗೆಲ್ಲಲು 139 ರನ್ ಬೇಕಿದೆ.