ನಾಳೆ ಸಾವಯುವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ಮೇಳ

ಬೆಂಗಳೂರು, ಜ.17-ಬಹುನಿರೀಕ್ಷಿತ ಸಾವಯವ ಮತ್ತು ಸಿರಿಧಾನ್ಯಗಳುಳ್ಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳವು ನಾಳೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಪ್ರಾರಂಭವಾಗಲಿದೆ.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಈ ಕುರಿತು ನಾಳೆ ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಸಾವಯವ ಸಿರಿ ಧಾನ್ಯಗಳು ನಮಗೆ ಮತ್ತು ರೈತರಿಗೆ, ಭೂಮಿಗೆ ಎಷ್ಟು ಉತ್ತಮವಾದುದು ಎಂಬುದನ್ನು ಸಾರಲು ಈ ಮೇಳ ಸಹಕಾರಿಯಾಗಲಿದೆ.
ಪಾಶ್ಚಿಮಾತ್ಯಸಂಸ್ಕøತಿಯಿಂದಾಗಿ ಸಿರಿಧಾನ್ಯಗಳು ಮುಖ್ಯವಾಹಿನಿಯಿಂದ ಕಣ್ಮರೆಯಾಗುತ್ತಿವೆ. ಆದರೂ ನಗರದ ಜನರಲ್ಲಿ ಇತ್ತೀಚೆಗೆ ಆರೋಗ್ಯದ ಅರಿವು ಮೂಡಿದ್ದು, ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಒಟ್ಟಾರೆ 400 ಮಳಿಗೆಗಳನ್ನು ಒಳಗೊಂಡಂತೆ 220 ಪ್ರದರ್ಶಕರು ಇರುತ್ತಾರೆ.23 ಆಹಾರ ಮಳಿಗೆಗಳು ಸೇರಿದಂತೆ ಒಟ್ಟು 243 ಪ್ರದರ್ಶಕರು ಭಾಗವಹಿಸಲಿದ್ದಾರೆ. ಛತ್ತೀಸ್‍ಗಢ, ಒಡಿಸ್ಸಾ, ಉತ್ತರಾಖಂಡ, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲಪ್ರದೇಶ, ಪಂಜಾಬ್, ಮಣಿಪುರ, ಕೇರಳ, ತೆಲಂಗಾಣ ಅಲ್ಲದೆ ಚಿಲಿ, ಪೆÇೀಲೆಂಡ್,ಶ್ರೀಲಂಕಾ, ಜರ್ಮನಿ, ಯುಎಇ, ಸ್ವಿಡ್ಜರ್‍ಲ್ಯಾಂಡ್ ದೇಶಗಳು ಭಾಗವಹಿಸಲಿವೆ. ಜೊತೆಗೆ 16 ನವೋದ್ಯಮ ಸಂಸ್ಥೆಗಳು ಕೂಡ ಭಾಗವಹಿಸಲಿವೆ ಎಂದು ಹೇಳಿದರು.
ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ಸ್ಪರ್ಧೆಯನ್ನು ಎರಡು ವರ್ಗಗಳಲ್ಲಿ ನಡೆಸಲಾಗುವುದು. ಪ್ರತಿವರ್ಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನದಲ್ಲಿ ವಿಜೇತರಾದವರಿಗೆ ತಲಾ 10,8, 6 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ