ಲಂಡನ್ : ವಿವಾದಾತ್ಮಕ ಬ್ರೆಕ್ಸಿಟ್ ವಿಷಯದಲ್ಲಿನ ವಿಶ್ವಾಸ ಮತವನ್ನು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಬ್ರಿಟನ್ ಸಂಸತ್ತಿನಲ್ಲಿ ಗೆದ್ದುಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಮೇ ಅವರು ವಿಶ್ವಾಸ ಮತವನ್ನು 325 – 306 ಮತಗಳ ಅಂತರದಲ್ಲಿ, 19 ಮತಗಳ ಬಹುಮತದೊಂದಿಗೆ ಗೆದ್ದುಕೊಂಡರು. ಒಂದು ದಿನದ ಹಿಂದಷ್ಟೇ ಅವರ ಸರಕಾರಕ್ಕೆ ಐತಿಹಾಸಿಕ ಸಂಸತ್ ಸೋಲು ಉಂಟಾಗಿ ತೀವ್ರ ಮುಖಭಂಗವಾಗಿತ್ತು. ಐರೋಪ್ಯ ಒಕ್ಕೂಟದಿಂದ ಹೊರಬರುವ ಉಪಕ್ರಮವೇ ಬ್ರೆಕ್ಸಿಟ್ ಆಗಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೇ ಅವರು, ಸರಕಾರ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದಿದೆ; ಇದರಿಂದಾಗಿ ಬ್ರೆಕ್ಸಿಟ್ ವಿಷಯದಲ್ಲಿ ಮುಂದಡಿ ಇಡುವುದಕ್ಕೆ ನಮಗೆಲ್ಲ ಅವಕಾಶವನ್ನು ಕಲ್ಪಿಸಿದೆ. ಬ್ರಿಟನ್ ಮಹಾಜನತೆ ಬ್ರೆಕ್ಸಿಟ್ ಪೂರೈಸುವ ದಿಶೆಯಲ್ಲಿ ಮುಂದಡಿ ಇಡಬೇಕೆಂದು ಬಯಸುತ್ತದೆ. ಅಂತೆಯೇ ನಾವು ನಡೆದುಕೊಳ್ಳಬೇಕಿದೆ. ಆ ಪ್ರಕಾರ ನಾವೆಲ್ಲ ನಮ್ಮ ನಮ್ಮ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಪ್ರಜೆಗಳ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.
British PM Theresa May wins confidence vote, calls on MPs to work together to deliver Brexit