ಬೆಂಗಳೂರು,ಜ.16-ಲೋಕಸಭಾ ಚುನಾವಣೆಗೆ ಸಿದ್ದತೆಗಳು ಚುರುಕುಗೊಂಡಿದ್ದು, ರಾಜ್ಯದ ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ 5 ಕೋಟಿ 3 ಲಕ್ಷದ 36 ಸಾವಿರದ 666 ಮಂದಿ ಮತದಾರರು ಮುಂದಿನ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಅರ್ಹರಿರುತ್ತಾರೆ.
ಇವರಲ್ಲಿ 2ಕೋಟಿ 54 ಲಕ್ಷದ 84 ಸಾವಿರದ 972 ಮಂದಿ ಪುರುಷರು, 2 ಕೋಟಿ 48 ಲಕ್ಷದ 46 ಸಾವಿರದ 976 ಮಂದಿ ಮಹಿಳಾ ಮತದಾರರಿದ್ದಾರೆ.4718 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಹೊಸದಾಗಿ 17 ಲಕ್ಷದ 45 ಸಾವಿರ ಅರ್ಜಿಗಳು ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಬಂದಿತ್ತು. ಈ ಪೈಕಿ 6 ಲಕ್ಷದ 35 ಸಾವಿರ ಎನ್‍ರೋಲ್ ಆಗಿದೆ.
7 ಲಕ್ಷದ 12ಸಾವಿರ ಯುವ ಮತದಾರರು ಹೊಸದಾಗಿ ಹೆಸರು ನೋಂದಾಯಿಸಿದ್ದು, ಮುಂದಿನ ದಿನಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮತದಾರರಿಗೆ ಮಾಹಿತಿ ಒದಗಿಸಲು 1950 ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ ಎಂದ ಅವರು, ಲೋಕಸಭಾ ಚುನಾವಣೆ ಸಂಬಂಧ ಎಲ್ಲ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.