ಸಿಬಿಐ ನಿರ್ದೇಶಕ ಸ್ಥಾನದಿಂದ ವರ್ಮಾ ವಜಾ ಕಾನೂನು ಬಾಹಿರ: ಪ್ರಧಾನಿಗೆ ಖರ್ಗೆ ಪತ್ರ

ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್​ ವರ್ಮಾರನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಕಾನೂನು ಬಾಹಿರವಾದದ್ದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಖರ್ಗೆ, ಸಿಬಿಐ ನಿರ್ದೇಶಕ ಸ್ಥಾನದಲ್ಲಿದ್ದ ವರ್ಮಾ ಅವರನ್ನು ವಜಾ ಮಾಡಿ, ಆ ಸ್ಥಾನಕ್ಕೆ ಎಂ.ನಾಗೇಶ್ವರ್ ರಾವ್ ಅವರನ್ನು ನೇಮಕಮಾಡಿರುವುದು ಕಾನೂನು ಬದ್ಧವಾದ ಕ್ರಮವಲ್ಲ. ಇದು ಆಯ್ಕೆ ಸಮಿತಿ ಅನುಮೋದನೆಯನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಜನವರಿ 10ರ ಸಭೆಯ ನಡಾವಳಿಗಳನ್ನು,ಸಿವಿಸಿ ವರದಿ ಹಾಗೂ ನಿವೃತ್ತ ನ್ಯಾ. ಪಟ್ನಾಯಕ್​ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಎಂದು ಸವಾಲು ಹಾಕಿದ್ದಾರೆ. ಸಿಬಿಐಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲು ಕೂಡಲೆ ಆಯ್ಕೆ ಸಮಿತಿ ಸಭೆ ಕರೆಯುವಂತೆಯೂ ಖರ್ಗೆ ಒತ್ತಾಯಿಸಿದ್ದಾರೆ.

Make Details Of Meeting On Ex-CBI Chief Public: Mallikarjun Kharge to PM

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ