ಬಲಂಗೀರ್: ಹಿಂದಿನ ಸರ್ಕಾರಗಳು ದೇಶವನ್ನು ಸುಲ್ತಾನರಂತೆ ಆಳಿದ್ದಾರೆ. ದೇಶದಲ್ಲಿನ ಶ್ರೀಮಂತ ಪರಂಪರೆಗಳನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಡಿಶಾಗೆ ಭೇಟಿ ನೀಡಿದ ಪ್ರಧಾನಿ ಮೋದಿ 1,500 ಕೋಟಿ ರೂ ವೆಚ್ಚದ ವಿವಿಧ ಯೋಜನೆಗಳಿಗೆ ಹಗೂ ಬಿಚುಪಲ್ಲಿ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿಂದಿನ ಸರ್ಕಾರಗಳು ದೇಶದ ಪರಂಪರೆಯನ್ನು ನಿರ್ಲಕ್ಷ್ಯಮಾಡಿವೆ. ಆದರೆ ನಮ್ಮ ಸರ್ಕಾರ ದೇಶದ ಶ್ರೀಮಂತ ಪರಂಪರೆಯನ್ನು ರಕ್ಷಿಸಿ ಕಾಪಾಡುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ಹೇಳಿದರು.
ಯೋಗ ಭಾರತದ ಪ್ರಾಚೀನ ಸಂಪತ್ತು ಎಂಬುದನ್ನು ಕೂಡ ಮರೆತು ಹಲವರು ಯೋಗ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಕಟ್ಟಲು ಸಾಧ್ಯವಿಲ್ಲದ ಪ್ರಾಚೀನ ವಸ್ತುಗಳು, ಮೂರ್ತಿಗಳನ್ನು ಕದ್ದು ಹೊರದೇಶಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಅಂತಹ ಅತ್ಯಮೂಲ್ಯ ವಸ್ತುಗಳನ್ನು ಮರಳಿ ದೇಶಕ್ಕೆ ತರುವ ನಿಟ್ಟಿನಲ್ಲಿ ಎನ್ ಡಿಎ ಸರ್ಕಾರ ತಳಮಟ್ಟದಿಂದ ಕ್ರಮ ಕೈಗೊಳ್ಳುತ್ತಿದೆ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ ವಿದೇಶಗಳಿಂದ ಅನೇಕ ಮೂರ್ತಿಗಳು, ಪ್ರಾಚೀನ ವಸ್ತುಗಳನ್ನು ಕೇಂದ್ರ ಸರ್ಕಾರ ಮತ್ತೆ ತರಿಸಿಕೊಂಡಿದೆ ಎಂದರು.
PM Modi Launches Projects Worth Over Rs. 1,550 Crore In Balangir