ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಎ ಗೆ ತೆರಳಿದ ಕೇಂದ್ರ ವಿತ್ತ ಸಚಿವ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಯುಎಸ್​ಗೆ ತೆರಳಿದ್ದಾರೆ.

ವೈದ್ಯಕೀಯ ತಪಾಸಣೆಗಾಗಿ ಭಾನುವಾರ ರಾತ್ರಿಯೇ ಯುಎಸ್​ಗೆ ಹೋಗಿದ್ದಾರೆ. ಫೆ.1ರಂದು ಕೇಂದ್ರ ಸರ್ಕಾರದ ಕೊನೇ ಬಜೆಟ್​ ಮಂಡನೆಯಾಗಲಿದ್ದು ಅಂದು ಜೇಟ್ಲಿ ಹಾಜರಾಗಲೇಬೇಕಾಗಿದೆ. ಇದು ಅವರ ಆರನೇ ಆಯವ್ಯಯ ಮಂಡನೆಯಾಗಿದೆ.

2018ರ ಏಪ್ರಿಲ್​ನಲ್ಲಿ ಅರುಣ್​ ಜೇಟ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್​ಗೆ ದಾಖಲಾಗಿದ್ದರು. ನಂತರ ಮೇ 14ರಂದು ಅವರಿಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಆಗ ರೈಲ್ವೆ ಸಚಿವರಾಗಿದ್ದ ಪಿಯುಷ್​ ಗೋಯಲ್​ ಅವರಿಗೇ ಹಣಕಾಸು ಖಾತೆಯನ್ನು ವಹಿಸಲಾಗಿತ್ತು.

Arun Jaitley flies to US for medical check-up

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ