ಕುಂಭಮೇಳ-ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು

ಪ್ರಯಾಗ್ ರಾಜ್: ಮಕರ ಸಂಕ್ರಾಂತಿ ಹಾಗೂ ಅರ್ಧ ಕುಂಭಮೇಳ ಹಿನ್ನಲೆಯಲ್ಲಿ ಮುಂಜಾನೆ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸೇರಿದ ಸ್ಥಳವಾದ ಪ್ರಯಾಗದಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.

ಕುಂಭಮೇಳ ಸಂದರ್ಭದಲ್ಲಿ ಸಕಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸಂಗಮದಲ್ಲಿ ಸ್ನಾನದ ಘಾಟ್ ಪ್ರದೇಶದಲ್ಲಿ 5 ಕಿಲೋ ಮೀಟರ್ ಉದ್ದದವರೆಗೆ ಸಂಚರಿಸುವ ಭಕ್ತರಿಗೆ ಅನುಕೂಲವಾಗಲು ತೆಪ್ಪದ ಸೇತುವೆ ನಿರ್ಮಿಸಲಾಗಿತ್ತು. ಭಕ್ತರ ಪ್ರವೇಶ ಮತ್ತು ನಿರ್ಗಮಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ದೇಶ ವಿದೇಶಗಳಿಂದ ಆಗಮಿಸಿರುವ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳೆದ ಶುಭ ಮುಹೂರ್ತದಲ್ಲಿ ಧಾರ್ಮಿಕ ಪಠಣಗಳು, ಭಜನೆಗಳು ಕೇಳಿಬಂದವು.

ಕುಂಭ ಮೇಳದಲ್ಲಿ 45 ನಿಮಿಷಗಳ ಶಾಹಿ ಸ್ನಾನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದ್ದು ಅದು ಈ ದಿನದ ನಿರ್ದಿಷ್ಟ ಗಳಿಗೆಯಲ್ಲಿ ನಡೆಯಲಿದೆ. ಪ್ರತಿ ಆರು ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ.

Devotees Take Holy Dip At Triveni Sangam On Makar Sankranti

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ