ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡು ದಿನಗಳ ಅಧಿಕೃತ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಿಲಾ ಸೀತಾರಾಮನ್

The Union Minister for Defence, Smt. Nirmala Sitharaman being received by the Commander-in- Chief Andaman & Nicobar, Command Vice Admiral, Bimal Verma, on her arrival, at Port Blair on October 18, 2017.

ಪೋರ್ಟ್‍ಬ್ಲೇರ್, ಜ.14 (ಪಿಟಿಐ)- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡು ದಿನಗಳ ಅಧಿಕೃತ ಪ್ರವಾಸದಲ್ಲಿರುವ ರಕ್ಷಣಾ ಸಚಿವೆ ನಿರ್ಮಿಲಾ ಸೀತಾರಾಮನ್ ಇಂದು ಮಲಾಕ್ಕಾ ಜಲಸಂಧಿ ಪ್ರದೇಶದಲ್ಲಿ ವಿಶೇಷ ಪಡೆಗಳ ಭೂಮಿ, ವಾಯು ಮತ್ತು ಸಾಗರ ಯುದ್ಧ ತಂತ್ರ ಕಾರ್ಯಾಚರಣೆಗಳನ್ನು ಪರಾಮರ್ಶಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಭೂ ಸೇನೆ, ವಾಯುಪಡೆ, ನೌಕಾದಳ ಮತ್ತು ಕರಾವಳಿ ರಕ್ಷಣಾ ಪಡೆಯ ಜಂಟಿ ಸಮರಾಭ್ಯಾಸವನ್ನು ವೀಕ್ಷಿಸಿದ ರಕ್ಷಣಾ ಸಚಿವರು ಭಾರತೀಯ ಸೇನಾ ಸಾಮಥ್ರ್ಯವನ್ನು ಪ್ರಶಂಸಿಸಿದರು.

ಜಾಯಿಂಟ್ ಮಿಲಿಟರ್ ಡ್ರಿಲ್ ವೇಳೆ ಮೂರು ತಾಲೀಮುಗಳನ್ನು ನಡೆಸಲಾಯಿತು. ಯುದ್ಧದ ವೇಳೆ ಅಪಾಯದಿಂದ ಪಾರಾಗಿ ಬದುಕುಳಿಯುವ ಕಾರ್ಯಾಚರಣೆ, ಭೂಮಿ ಮತ್ತು ಸಾಗರ ಇವೆರಡರಲ್ಲೂ ಸಮರ ಕೌಶಲ್ಯ ಹಾಗೂ ಭಾರತದ ಮೂರು ಪಡೆಗಳ ಜಂಟಿ ಸಮರಾಭ್ಯಾಸಗಳನ್ನು ನಿರ್ಮಲಾ ವೀಕ್ಷಿಸಿದರು.

ಅಂಡಮಾನ್ ಮತ್ತು ನಿಕೋಬಾರ್ ಭಾರತದ ಮೂರು ಪಡೆಗಳ ಕಮಾಂಡ್ ಹೊಂದಿದೆ. ಇಲ್ಲಿನ ಮಲಕ್ಕಾ ಜಲಸಂಧಿ ಬಳಿ ಇರುವ ದ್ವೀಪ ಸಮೂಹಗಳು ಸೇನಾಪಡೆಗಳಿಗೆ ಮಹತ್ವದ ಸ್ಥಳವಾಗಿದೆ. ಈ ಜಲಸಂಧಿಯು ಸಾಗರ ಮಾರ್ಗದ ಬಹುಮುಖ್ಯ ಸಂವಹನ ಸ್ಥಳವಾಗಿದೆ. ಈ ಪ್ರದೇಶವನ್ನು ಭಾರತೀಯ ನೌಕಾದಳಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ವೈರಿಗಳ ನೌಕೆಗಳ ಮೇಲೆ ತೀವ್ರ ನಿಗಾವಹಿಸಲು ಸಹಕಾರಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ