ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪರೇಡ್ ಪೂರ್ವಾಭ್ಯಾಸ ನಡೆಯುತ್ತಿರುವ ಸ್ಥಳಕ್ಕೆ ಏಕಾಏಕಿ ನುಗ್ಗಿದ ಮಹಿಳೆಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಘಟನೆ ನಡೆದಿದೆ.
ಇಂಡಿಯಾ ಗೇಟ್ ಬಳಿ ಬಿಗಿ ಭದ್ರತೆಯೊಂದಿಗೆ ಗಣರಾಜ್ಯೋತ್ಸವ ದಿನಾಚರಣೆ ಪೂರ್ವಾಭ್ಯಾಸ ನಡೆಸಲಾಗುತ್ತಿತ್ತು. ಈ ವೇಳೆ ಅಮರ್ಜವಾನ್ ಜ್ಯೋತಿ ಇದ್ದಲ್ಲಿ ಏಕಾಏಕಿ ನುಗ್ಗಿದ ಮಹಿಳೆ,ಭದ್ರತಾ ಸಿಬ್ಬಂದಿ, ಯೋಧರನ್ನೆಲ್ಲ ತಳ್ಳಿ ಸ್ಮಾರಕ ಸ್ಥಳಕ್ಕೆ ಧಾವಿಸಿ ಅಪಾರ ಗದ್ದಲ ಉಂಟು ಮಾಡಿದ್ದಾರೆ. ಅಲ್ಲದೇ ಮಹಿಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ. ತಕ್ಷಣ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ನಂತರ ದೆಹಲಿ ಪೊಲೀಸ್ ಮಹಿಳಾ ಪೇದೆ ಮಹಿಳೆಯನ್ನು ವಶಕ್ಕೆ ಪಡೆದು ಸಂಸತ್ತು ರಸ್ತೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಮಹಿಳೆ ಹೆಸರು ಸುಲ್ತಾನಾ ಎಂದಾಗಿದ್ದು, ಹೈದರಾಬಾದ್ನ ನಿಜಾಮಾಬಾದ್ನ ನಿವಾಸಿಯಾಗಿದ್ದಾರೆ. ಸ್ವಲ್ಪ ಮಟ್ಟಿನ ಮಾನಸಿಕ ಅಸ್ವಸ್ಥತೆ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಮನೆಯನ್ನು ಬಿಟ್ಟು ಆಗಲೇ ಎರಡು ದಿನಗಳಾಗಿವೆ. ಮುಂಬೈಗೆ ಆಕೆಯ ಸಂಬಂಧಿಕರ ಮನೆಗೆ ಹೋಗುವವಳು ದಾರಿತಪ್ಪಿ ದೆಹಲಿಗೆ ಬಂದಿದ್ದಾಳೆ. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗಿದ್ದು ಈಗ ಶೆಲ್ಟರ್ ಹೋಂಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“Pak Zindabad,” Woman Shouts At India Gate, Disrupts Republic Day Preparation