ಪ್ರಧಾನಿ ಮೋದಿ ಹಿಟ್ಲರ್ ನಂತೆ ಸರ್ವಾಧಿಕಾರಿ: ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಕಿಡಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರದ್ದು, ಸರ್ವಾಧಿಕಾರಿ ಧೋರಣೆಯಾಗಿದ್ದು, ಅರೊಬ್ಬ ಹಿಟ್ಲರ್ ನಂತೆ ವರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಸಚಿವ, ಸುಶೀಲ್ ಕುಮಾರ್ ಶಿಂಧೆ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಅವರು ಯಾರ ಮಾತನ್ನಾದರೂ ಕೇಳುತ್ತಾರಾ? ಅವರಿಗೇನನಿಸುತ್ತೋ ಅದನ್ನು ಮಾಡುತ್ತ, ತಮ್ಮ ಮಾತನ್ನಷ್ಟೇ ತಾವು ಕೇಳುತ್ತಿದ್ದಾರೆ.   ರಾತ್ರೋರಾತ್ರಿ ಸಿಬಿಐ ನಿರ್ದೇಶಕರನ್ನು ವಜಾ ಮಾಡಿದರು, ನೋಟು ಅಮಾನ್ಯೀಕರಣವನ್ನು ದೇಶದ ಜನತೆ ಮೇಲೆ ಹೇರಿದರು.ಹೀಗೆ ಸರ್ವಾಧಿಕಾರಿ ರೀತಿ ವರ್ತಿಸುತ್ತಿದದರೆ. ಇಂತಹ ದೊಡ್ಡ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವಾಗ  ಅವರು ಯಾರನ್ನಾದರೂ ಕೇಳಿದ..ರೇ? ಕನಿಷ್ಠ ಹಣಕಾಸು ಸಚಿವರು ಅಥವಾ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರನ್ನಾದರೂ ಕೇಳಿದರೆ..? ಇಲ್ಲ. ಅವರಿಗೇನು ಅನ್ನಿಸಿತ್ತೋ ಅದನ್ನಷ್ಟೇ ಮಾಡಿದ್ದಾರೆ… ಇದೆಲ್ಲವು ಸರ್ವಾಧಿಕಾರವನ್ನೇ ತೋರಿಸುತ್ತದೆ ಎಂದು ಗುಡುಗಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಕಾರ್ಯಕರ್ತರ ಪ್ರತಿಭಟನೆ ಅಥವಾ ಜಾಥಾಗಳು ಎಲ್ಲ ಕಾಲದಲ್ಲೂ ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಸೋಲಾಪುರದಲ್ಲಿ ಹೊಡೆದಿದ್ದಾರೆ. ಪೊಲೀಸರಿಗೆ ಸೂಚನೆ ನೀಡಿದ ಬಳಿಕ ಅವರು ಈ ಕೆಲಸ ಮಾಡಿದ್ದಾರೆ. ಇದಕ್ಕೆ ಸೂಚನೆ ನೀಡಿದವರು ಯಾರು. ಪ್ರಧಾನಿ ಓರ್ವ  ಸರ್ವಾಧಿಕಾರಿ ಎಂದು ಹೇಳಿದರು.

ಟೀ ಮಾರುವವನೊಬ್ಬನನ್ನು ಪ್ರಧಾನಿಯನ್ನಾಗಿ ಮಾಡಬಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಪ್ರಧಾನ ಮಂತ್ರಿಯವರು ಗೌರವ ನೀಡುತ್ತಿಲ್ಲ. ಚಹಾ ಮಾರಾಟಗಾರನು ಪ್ರಧಾನಿಯಾಗಿದ್ದಾನೆಂದು ಲೆಕ್ಕವಿಲ್ಲದಷ್ಟು ಬಾರಿ ನೀವು ಕೇಳಿದ್ದೀರಿ. ಆದರೆ ನಮ್ಮ ಪ್ರಧಾನಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ ಅಥವಾ ಸಂವಿಧಾನಕ್ಕೆ ಅಪರೂಪವಾಗಿ ಗೌರವ ಕೊಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ