ಬೆಂಗಳೂರು ಜ.11-ವಿದ್ಯಾರ್ಥಿಗಳಲ್ಲಿನ ಸಂವಹನ ಕೌಶಲ್ಯಕ್ಕೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಟಾಕಥಾನ್ 2019 ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ರಾಜ್ಯದ ವಿವಿದ ನಗರದದಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಸಂವಹನ ಕೌಶಲ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿಯ ಜೊತೆಯಲ್ಲಿಯೇ ಸಂವಹನ ಕೌಶಲ್ಯಕ್ಕೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆ ಅಪ್ನಾ ಇಂಟರ್ ನ್ಯಾಷನಲ್ ಬ್ಯೂಸಿನೆಸ್ ನೆಟ್ ವರ್ಕ್ ಈ ಕಾರ್ಯಕ್ರಮ ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ಉತ್ತಮವಾಗಿ ಭಾಷಣ ಮಾಡಿದ ಭರತ್ (ನವೀಕರಿಸಬಹುದಾದ ಇಂಧನ), ಸುಪ್ರಿಯಾ ಪೆರಿ (ಜಲ ಮಾಲಿನ್ಯ), ಅನಾಮಿಕಾ ಹರಿ (ಆಹಾರೋತ್ಪನ್ನಗಳ ಕಲಬೆರೆಕೆ) ಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು ಇಂಟರ್ ನ್ಯಾಷನಲ್ ಬ್ಯೂಸಿನೆಸ್ ಸಮಿಟ್ 2019 ರಲ್ಲಿ ಮಾತನಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.