ಬೆಂಗಳೂರು,ಜ.11- ಮಲ್ಪೆಯಲ್ಲಿ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಸಂಬಂಧ ಸರ್ಕಾರ ಸಹಾಯ ಕೋರಿದರೆ ನಾಪತ್ತೆಯಾದವರ ಪತ್ತೆಗೆ ಇಸ್ರೋ ಸಿದ್ಧವಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದ್ದಾರೆ.
ಮೀನುಗಾರರ ಪತ್ತೆಗೆ ಸರ್ಕಾರ ಈವರೆಗೆ ಯಾವುದೇ ನೆರವು ಕೋರಿಲ್ಲ. ನಮ್ಮಲ್ಲಿ ಅಲರ್ಟ್, ನೇವಿಗೇಷನ್ ಎಂಬ ಎರಡು ಸಿಸ್ಟಂಗಳಿವೆ. ಸರ್ಕಾರ ನೆರವು ಕೋರಿದರೆ ಅಲರ್ಟ್ ಸಿಸ್ಟಂನಿಂದ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ಸಿದ್ಧ ಎಂದರು.
ಆದರೆ ಈವರಗೆ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ಒಂದು ವೇಳೆ ಸರ್ಕಾರ ನೆರವು ಕೋರಿದರೆ ಸಹಕರಿಸುವುದಾಗಿ ತಿಳಿಸಿದರು.