ಇಂದು ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಅವರ ಜನ್ಮ ದಿನ

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ 46ನೇ ಜನ್ಮಾ ದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ.

ಸದ್ಯ ಭಾರತ ಅಂಡರ್ 19 ತಂಡ ಮತ್ತು ಭಾರತ ಎ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿ ಯುವ ಆಟಗಾರರನ್ನ ಸೃಷ್ಟಿ ಭವಿಷ್ಯದ ಟೀಂ ಇಂಡಿಯಾವನ್ನ ಕಟ್ಟುತ್ತಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಕಿರಿಯರ ಅಂಡರ್ 19 ವಿಶ್ವಕಪ್ ಗೆಲ್ಲಿಸಿ ಕೊಡುವಲ್ಲಿ ರಾಹುಲ್ ದ್ರಾವಿಡ್ ನಿಣಾಯಕ ಪಾತ್ರವಹಿಸಿದ್ರು. 1996ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಏಕದಿನ ಆವೃತ್ತಿಗೆ ಪದಾರ್ಪಣೆ ಮಾಡಿದ್ದರು. ನಂತರ ಅದೇ ವರ್ಷ ಲಾಡ್ರ್ಸ್ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟೆಗೆ ಪದಾರ್ಪಣೆ ಮಾಡುವ ಮೂಲಕ ಟೆಸ್ಟ್ ಫಾರ್ಮೆಟ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ಎಲ್ಲವೂ ಇತಿಹಾಸ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಆಪಾದ್ಬಾಂಧವನಾಗಿ ನಿಂತರು. ಈ ಕಾರಣಕ್ಕಾಗಿ ಗ್ರೇಟ್ ವಾಲ್ ಅಂತ ಕರೆಸಿಕೊಂಡರು. ಟೆಸ್ಟ್ ನಲ್ಲಿ 13,288 ರನ್ ಹಾಗೂ 10,889 ರನ್ ಗಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ