ಸಂಕ್ರಾಂತಿಗೆ ಕೆಎಸ್ ಆರ್ ಟಿಸಿ  500 ವಿಶೇಷ ಬಸ್, ಟಿಕೆಟ್​ನಲ್ಲಿ ಶೇ.10ರಷ್ಟು ರಿಯಾಯಿತಿ

ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಪ್ರಯಾಣಿಕರಿಗೆ ಬಂಪರ್ ಉಡುಗೊರೆ ನೀಡಿದ್ದು, ಟಿಕೆಟ್ ದರದಲ್ಲಿ ಶೇ.5ರಿಂದ ಶೇ.10ವರೆಗೂ ರಿಯಾಯಿತಿ ಘೋಷಣೆ ಮಾಡಿದೆ.

ಸಂಕ್ರಾಂತಿ ಹಬ್ಬದ ನಿಟ್ಟಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದು, ಈ ಪೈಕಿ ಹೆಚ್ಚುವರಿ ಬಸ್ ಗಳು ಹಾಗು ಹಬ್ಬದ ನಿಮಿತ್ತ ಟೆಕೆಟ್ ನಲ್ಲಿ ರಿಯಾಯಿತಿ ಕೂಡ ಘೋಷಣೆ ಮಾಡಿದೆ.

ಇನ್ನು ಹಬ್ಬಕ್ಕಾಗಿ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ಓಡಿಸಲು ಸಂಸ್ಛೆ ನಿರ್ಧರಿಸಿದ್ದು, ಇದಕ್ಕಾಗಿ 500 ಹೆಚ್ಚುವರಿ ಬಸ್ ಗಳನ್ನು ಬಿಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಸಂಸ್ಛೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಸಂಕ್ರಾಂತಿ ಹಬ್ಬಕ್ಕೆ ವಾರಾಂತ್ಯದಿಂದಲೇ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಜ.11 ಹಾಗೂ 12ರಿಂದಲೇ 500ಕ್ಕೂ ಹೆಚ್ಚುವರಿ ಬಸ್​ಗಳನ್ನು ಬಿಡಲಾಗುತ್ತಿದೆ. ರಾಜ್ಯ ಮತ್ತು ಅಂತರರಾಜ್ಯಗಳಿಗೆ ಈ ಸೇವೆ ಇರಲಿದ್ದು, ಈ ವಿಶೇಷ ವಾಹನ ಸಂಕ್ರಾಂತಿ ವಾಹನಗಳ ವ್ಯವಸ್ಥೆ ಇಲ್ಲ.

ಟಿಕೆಟ್ ನಲ್ಲಿ ರಿಯಾಯಿತಿ : ಬುಕಿಂಗ್ ಗಾಗಿ ಈಗಾಗಲೇ 707 ಕಂಪ್ಯೂಟರ್​ ಬುಕಿಂಗ್​ ಕೂಡ ಆರಂಭವಾಗಿದ್ದು, ನಾಲ್ಕುಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಬುಕಿಂಗ್​ ಮಾಡಿದರೆ ಶೇ.5ರಷ್ಟು ರಿಯಾಯತಿ ಸಿಗಲಿದೆ. ಹೋಗಿ ಬರುವ ಟಿಕೆಟ್ ಗಳನ್ನು ಒಟ್ಟಿಗೆ ಬುಕ್ಕಿಂಗ್​ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್​ಸೈಟ್ ಗೆ ಭೇಟಿ ನೀಡಲು ಎಂದು ಕೆಎಸ್​ ಆರ್​ಟಿಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ