ಮುಂಬೈ:ಶ್ರೀಮಂತರ ಕ್ರಿಕೆಟ್ ಟೂರ್ನಿ ಐಪಿಎಲ್ 12ನೇ ಆವೃತ್ತಿ ಭಾರತದಲ್ಲೆ ನಡೆಯುವ ಕುರಿತು ಬಿಸಿಸಿಐ ಮೊನ್ನೆಯಷ್ಟೆ ಘೋಷಿಸಿತ್ತು.
ಇದೀಗ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಟೂರ್ನಿಗೆ ಭದ್ರತೆ ದೃಷ್ಟಿಯಿಂದ ಟೂರ್ನಿ ಅರ್ಧ ಭಾಗವನ್ನ ತವರಿನಲ್ಲಿ ಆತಿಥ್ಯ ವಹಿಸುವ ಅಥವಾ ಇಡೀ ಟೂರ್ನಿಯನ್ನ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸುತ್ತಿದೆ.
ಐಪಿಎಲ್ ವೇಳೆಯೆ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಟೂರ್ನಿಗೆ ಭದ್ರತೆ ನೀಡೋದೆ ಬಿಸಿಸಿಐ ತಲೆ ನೋವಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಪ್ರತಿ ಫ್ರಾಂಚೈಸಿಗಳಿಗೆ ತವರಿನಲ್ಲಿ ತಲಾ ಮೂರು ಪಂದ್ಯಗಳನ್ನ ಕೊಟ್ಟು ವೇಳಾಪಟ್ಟಿಯನ್ನ ಮತ್ತೆ ಮರುಪರಿಷ್ಕರಿಸಿ ಬೇರೆಡೆ ಪಂದ್ಯವನ್ನ ಆಡಿಸಲು ತೀರ್ಮಾನಿಸಿದೆ.
ಸಾರ್ವತ್ರಿಕ ಚುನಾವಣೆ ದಿನಾಂಕ ಘೋಷಣೆಯಾಗದ ಕಾರಣ ಬಿಸಿಸಿಐ ಫೆಬ್ರವರಿ 2 ಅಥವಾ 3 ರಂದು ಪಂದ್ಯದ ವೇಳಾ ಪಟ್ಟಿಯನ್ನ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.
ಈ ಹಿಂದಿನ ಎರಡು ಚುನಾವಣೆಗಳಂತೆ ಪ್ರತಿ ಪಂದ್ಯಗಳಿಗೆ ಕೇಂದ್ರ ಸರ್ಕಾರ ಟೂರ್ನಿಗೆ ಭದ್ರತೆ ನೀಡಲು ಭರವಸೆ ನೀಡದಿದ್ದರೆ ಟೂರ್ನಿ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.