ಬೆಂಗಳೂರು, ಜ.7-ಇಂದಿನ ವೇಗದ ಬದುಕಿನಲ್ಲಿ ಬಹಳಷ್ಟು ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವುದು ಅಥವ ಜೀವ ಕಳೆದುಕೊಳ್ಳುವುದು ನಡೆಯುತ್ತಿದ್ದು, ಅವರ ಜೀವಕ್ಕೆ ಎರವಾಗುವ ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದರು.
ವಿಶ್ವ ಆ್ಯಂಬುಲೆನ್ಸ್ ದಿನದ ಅಂಗವಾಗಿ ಮಣಿಪಾಲï ಆಸ್ಪತ್ರೆ ನಗರದಲ್ಲಿಂದು ಆಯೋಜಿಸಿದ್ದ ನೀವು ಎಲ್ಲಿಯಾದರೂ ಜೀವವನ್ನು ಉಳಿಸಬಹುದು ಎಂಬ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆ್ಯಂಬುಲೆನ್ಸ್‍ಗಳಿಗೆ ನಾಗರಿಕರು ಸೂಕ್ತ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಅನೇಕ ಬಾರಿ ಅವುಗಳು ಮುಂದೆ ಸಾಗಲು ದಾರಿ ಮಾಡಿಕೊಡುವುದಿಲ್ಲ. ಆ್ಯಂಬುಲೆನ್ಸïವೊಂದಕ್ಕೆ ದಾರಿ ಬಿಟ್ಟುಕೊಡುವುದು ಎಷ್ಟು ಗಂಭೀರ ಮತ್ತು ಪ್ರಮುಖ ಎಂಬುದರ ಬಗ್ಗೆ ಜನರಲ್ಲಿ ಸಂವೇದನೆ ಮೂಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಜನರು ಇದನ್ನು ಅರ್ಥ ಮಾಡಿಕೊಂಡರೆ ಈ ನಿಟ್ಟಿನಲ್ಲಿ ಅರ್ಧ ಹೋರಾಟ ಗೆದ್ದಂತೆ. ಇದಕ್ಕಾಗಿಯೇ ಮಣಿಪಾಲï ಆಸ್ಪತ್ರೆ ಈ ಅಭಿಯಾನದ ಮೂಲಕ ಸಾಮಾನ್ಯ ಜನರಿಗೆ ಸುಲಭವಾದ ಜೀವ ಉಳಿಸುವ ತಂತ್ರಗಳಾದ ಸಿಪಿಆರï(ಕಾರ್ಡಿಯೋಪಲ್ಮನರಿ ರಿಸಸಿಟೇಷನï) ಮತ್ತು ಎಇಡಿ(ಆಟೋಮೇಟೆಡï ಎಕ್ಸïಟರ್ನಲï ಡಿಫೈಬ್ರಿಲ್ಲೇಟರï)ಗಳಲ್ಲಿ ಶಿಕ್ಷಣ ಮತ್ತು ತರಬೇತಿ ನೀಡುವ ಗುರಿ ಹೊಂದಿದೆ ಎಂದರು.
ಮಣಿಪಾಲï ಸಂಸ್ಥೆಯ ಎಲ್ಲಾ ಆಸ್ಪತ್ರೆಗಳಲ್ಲಿ, ವೆಬïಸೈಟï ಮೂಲಕ ಕಾದಿರಿಸುವುದರೊಂದಿಗೆ ಜನರು ಈ ತರಬೇತಿ ಕಾರ್ಯಕ್ರಮಗಳನ್ನು ಪಡೆಯಬಹುದಾಗಿದೆ.ಇದಲ್ಲದೆ ತಿಂಗಳ ಪ್ರತಿ ಎರಡನೇ ಶನಿವಾರ ಈ ತರಬೇತಿಗೆ ಸಮರ್ಪಿತವಾಗಿರುತ್ತದೆ.ಬೆಂಗಳೂರಿನ ಮೆಟ್ರೊ ಆಡಳಿತ ಸಿಬ್ಬಂದಿ ಮತ್ತು ಮಾಲïಗಳ ಸಿಬ್ಬಂದಿಗಳಿಂದ ಆರಂಭಿಸಿ ಪೆÇಲೀಸರು, ವಿದ್ಯಾರ್ಥಿಗಳು, ಸಾಮಾನ್ಯ ಜನರು ಮತ್ತು ಜಿಮï ತರಬೇತುದಾರರು ಮುಂತಾದವರಿಗೆ ಹಂತ ಹಂತವಾಗಿ ಈ ವರ್ಷ ತರಬೇತಿ ನೀಡುವ ಗುರಿಯನ್ನು ಆಸ್ಪತ್ರೆ ಹೊಂದಿದೆ ಎಂದು ಹೇಳಿದರು.
ಈ ಅಭಿಯಾನಕ್ಕೆ ಪೆÇಲೀಸï ಮಹಾನಿರ್ದೇಶಕ ಪಿ. ಹರಿಶೇಖರನ್, ನಟಿ ಶ್ವೇತ ಆರï. ಪ್ರಸಾದ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.ಅಭಿಯಾನದಲ್ಲಿ ಸುಮಾರು 200 ಜನರು ಭಾಗವಹಿಸಿದ್ದರು.