ರಾಜನಾಥ್ ಸಿಂಗ್ ಹೆಗಳಿಗೆ ಸಂಕಲ್ಪ ಪತ್ರ ಸಮಿತಿ ಹೊಣೆ

ಹೊಸದಿಲ್ಲಿ:ಮುಂಬರು ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರ ಸಮಿತಿ ಮುಖ್ಯಸ್ಥರಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಚಾರಕ ತಂಡದ ಮುಖ್ಯಸ್ಥರಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಬಿಜೆಪಿ ನೇಮಿಸಿದೆ.

ಚುನಾವಣಾ ತಯಾರಿಗಾಗಿ ಬಿಜೆಪಿ ರಾಷ್ಟ್ರೀಯ ಅ‘ಕ್ಷ ಅಮಿತ್ ಶಾ ಈಗಾಗಲೇ ೧೭ ತಂಡಗಳನ್ನು ರಚಿಸಿದ್ದಾರೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪೀಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಒಟ್ಟು ೨೦ ಸದಸ್ಯರು ಸಂಕಲ್ಪ ಪತ್ರ ಸಮಿತಿಯಲ್ಲಿರಲಿದ್ದು,  ಪಕ್ಷದ ಪ್ರಣಾಳಿಕೆ ತಯಾರಿಸುವ ಮಹತ್ತರವಾದ ಜವಾಬ್ದಾರಿ ಈ ಸಮಿತಿ ಮೇಲಿದೆ.

ಸಾಮಾಜಿಕ ಮತ್ತು ಸ್ವಯಂಸೇವಕ ಸಂಘಟನೆಗಳ ಮೇಲ್ವಿಚಾರಕ ಸಮಿತಿ ನೇತೃತ್ವವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವಹಿಸಿದರೆ, ಚುನಾವಣೆಯಲ್ಲಿ ಪ್ರಸ್ತಾಪ ಮಾಡಬಹುದಾದ ವಿಷಯ ವಿಚಾರಗಳನ್ನು ನಿ‘ರಿಸುವ ಸಮಿತಿ ನೇತೃತ್ವವನ್ನು ಸಚಿವೆ ಸುಷ್ಮಾ ಸ್ವರಾಜ್ ವಹಿಸಿಕೊಳ್ಳಲಿದ್ದಾರೆ.

ಪ್ರಸಾದ್ ಮಾ‘ಮ ತಂಡಗಳ ಮುಖ್ಯಸ್ಥರಾಗಿದ್ದುಘ, ಸಚಿವ ಪ್ರಕಾಶ್ ಜಾವಡೇಕರ್ ಸಭೆಗಳನ್ನು ಆಯೋಜಿಸುವ ತಂಡ ನೇತೃತ್ವವನ್ನು ವಹಿಸಿದ್ದಾರೆ.

ಲೋಕಸಭೆ ಚುನಾವಣೆ ಏಪ್ರಿಲ್-ಮೇಯಲ್ಲಿ ನಡೆಯುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ