10 ಮಹಿಳೆಯರಿಂದ ಅಯ್ಯಪ್ಪನ ದರ್ಶನ: ಕೇರಳ ಪೊಲೀಸ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಕೇರಳದಲ್ಲಿ ಹಿಂಸಾಚಾರದ ನಡುವೆಯೇ ಅಯ್ಯಪ್ಪನ ದರ್ಶನವನ್ನು ೧೦ ಮಹಿಳೆಯರು ಪಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುವುಕ್ಕೂ ಮೊದಲು ಇವರು ಪ್ರವೇಶಿಸಿzರೆ ಎಂದು ವರದಿಯಾಗಿದೆ. ಇಬ್ಬರು ಮಹಿಳೆಯರಾದ ಕನಕದುರ್ಗಾ ಮತ್ತು ಬಿಂದು ಅವರು ದೇಗುಲ ಪ್ರವೇಶಿಸಿದ ಮೊದಲ ಮಹಿಳೆಯರು ಎಂದು ಘೋಷಿಸಲಾಗಿತ್ತು. ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸುವ ಒಂದು ದಿನ ಮೊದಲೇ ಮೂವರು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.

ಸೆ.೨೮ರಂದು ಮಹಿಳೆಯರ ದೇಗುಲ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಳಿಕ ಈ ಬೆಳಣಿಗೆಗಳು ನಡೆದಿದ್ದು, ಕೇರಳದಲ್ಲಿ ಆಡಳಿತ ಮತ್ತು ವಿಪPಗಳ ಸಮರ ಮುಂದುವರಿದಿದೆ. ಹಲವೆಡೆ ಪ್ರತಿ‘ಟನೆ, ಹಿಂಸಾಚಾರಗಳು ನಡೆದಿವೆ.

ಜ.೧ರಿಂದ ಶಬರಿಮಲೆಗೆ ೫೦ ಮಹಿಳೆಯರು ‘ಟಿ ನೀಡಿದ್ದಾರೆ ಎನ್ನಲಾದ ವರದಿಗಳ ಪೈಕಿ ೧೦ ಮಹಿಳೆಯರು ಭೇಟಿ ನೀಡಿರುವುದು ದೃಢೀಕರಿಸುವ ವರದಿಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಈ ಮಹಿಳೆಯರ ವಿವರಗಳನ್ನು ಸಂಗ್ರಹಿಸಿ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತಿಳಿದುಬಂದಿದೆ.

ಆದಾಗ್ಯೂ, ಮಲೇಷ್ಯಾದ ಮಹಿಳೆಯರ ಭೇಟಿಯನ್ನು ದೃಢೀಕರಿಸಿದ ಪೊಲೀಸ್ ಮೂಲಗಳು, ಶಬರಿಮಲೆ ದರ್ಶನ ಪಡೆದಿರುವುದನ್ನು ಬಹಿರಂಗ ಪಡಿಸಲು ನಿರಾಕರಿಸಿವೆ. ಮಲೇಷ್ಯಾದ ತಮಿಳು ಸಮುದಾಯಕ್ಕೆ ಸೇರಿದ ೨೫ ಯಾತ್ರಿಕರ ತಂಡದಲ್ಲಿ ಮೂವರು ಮಹಿಳೆಯರ ಹೆಸರುಗಳಿವೆ ಎಂದು ಹೇಳಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿಮಾಡಿದೆ.

ಮಲೇಷ್ಯಾ ಮಹಿಳೆಯರ ಭೇಟಿ: ತಮಿಳು ಮೂಲದ ಮೂವರು ಮಲೇಷ್ಯಾದ ಮಹಿಳೆಯರು ಜ.೧ರಂದು ಶಬರಿಮಲೆಗೆ ಭೇಟಿ ನೀಡಿದ್ದರು. ಆದರೆ, ದೃಶ್ಯಗಳಲ್ಲಿ ದರ್ಶನದ ಬಳಿಕ ಹಿಂದಿರುಗುತ್ತಿರುವುದು ಇದೆ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿದ ೧೪ ಸೆಕೆಂಡ್‌ನ ವಿಡಿಯೋದಲ್ಲಿ ಮೂವರು ಮಹಿಳೆಯರು ಮುಖಕ್ಕೆ ಶಾಲುಗಳಿಂದ ಮುಚ್ಚಿಕೊಂಡಿರುವುದು ಇದೆ ಎಂದು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ