ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ

ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು (ಭಾರತ ಸರಕಾರ) ಇವರ ಸಹಯೋಗದಲ್ಲಿ ಡಿ.೦೭ ರಿಂದ೧೩ ರವರೆಗೆ 7 ದಿನಗಳ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಕಾರ್ಯಕ್ರಮ ಯೋಜನೆಯಡಿಯಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಪಿ.ನಲ್ಲುಮುತ್ತು ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಜ.೭ ರಂದು ಬೆಳಿಗ್ಗೆ 10-30 ರಿಂದ ರಾತ್ರಿ 9-00 ರವರೆಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ವಸ್ತು ಪ್ರದರ್ಶನವನ್ನು ಇಡಲಾಗಿದ್ದು, ವಸ್ತು ಪ್ರದರ್ಶನದಲ್ಲಿ ಸುಮಾರು 35 ಮಳಿಗೆಗಳಲ್ಲಿ ವಿವಿಧ ತರಹದ ಖಾದಿ, ಸಿಲ್ಕ, ಉಲನ್ ಬಟ್ಟೆಗಳು, ಗುಡಿ ಕೈಗಾರಿಕೆ ವಸ್ತುಗಳು, ಕರ ಕುಶಲ ವಸ್ತುಗಳು, ಮನೆಯಲ್ಲಿ ಮಾಡಿದ ಖಾದ್ಯ ವಸ್ತುಗಳು ಸಿಗುತ್ತವೆ.

ಪ್ರದರ್ಶನದಲ್ಲಿ ಕೈಯಿಂದಲೇ ನೂಲು ತೆಗೆದು, ಕೈಯಿಂದಲೇ ನೇಯ್ಗೆ ಮಾಡಿ ತಯಾರಿಸಲಾದಂತಹ ಖಾದಿ ಶರ್ಟಿಂಗ್, ಪ್ಯಾಂಟಿಂಗ, ಚದ್ದರ, ಬೆಡ್ ಶೀಟ್, ಟಾವೆಲ್, ಕೈವಸ್ತ್ರ ಇದಲ್ಲದೇ ವಿವಿಧ ವಿನ್ಯಾಸಗಳಿಂದ ಮಾಡಿದ ಸಿದ್ಧ ಉಡುಪುಗಳಾದ ಸಲ್ವಾರ ಕಮೀಜ್, ಶರ್ಟ್ ಗಳು ಹಾಗೂ ಚಿಕ್ಕ ಮಕ್ಕಳಿಗಾಗಿ ಸಿದ್ಧ ಉಡುಪುಗಳು ಸಹ ಸಿಗುತ್ತವೆ.
ಅಲ್ಲದೇ ಗುಡಿ ಕೈಗಾರಿಕೆ ವಸ್ತುಗಳಾದ ಆಟಿಕೆ ಸಾಮಾನುಗಳು, ಶೋ ಫೀಸ್‍ಗಳು, ಗ್ಲಾಸವರ್ಕ ವಸ್ತುಗಳು, ಕಸೂತಿ ವಸ್ತುಗಳು, ಹಾಗೆಯೇ ಸಣ್ಣ ಕೈಗಾರಿಕೆ ವಸ್ತುಗಳಾದ ಆಗರಬತ್ತಿ, ಸಾಬೂನು, ಚರ್ಮದ ಚಪ್ಪಲುಗಳು, ಚರ್ಮದ ಬ್ಯಾಗ್‍ಗಳು, ಚರ್ಮದಿಂದ ಮಾಡಿದ ಇತರ ವಸ್ತುಗಳು, ಗಿಡಮೂಲಿಕೆ ಜೌಷಧಗಳು ಸಿಗುತ್ತವೆ. ಹಾಗೆಯೇ ಮನೆಯಲ್ಲಿ ಮಾಡಿದ ರುಚಿ ಕಟ್ಟಾದ ಹಪ್ಪಳ, ಸಂಡಿಗೆ, ಕರದಂಟು, ಉಪ್ಪಿನಕಾಯಿ ಮುಂತಾದ ವಸ್ತುಗಳು ಸಿಗುತ್ತವೆ.

ಕಾರ್ಯಕ್ರಮ ಉದ್ಘಾಟನೆಯನ್ನು ಕೆಕೆಜಿಎಸ್ಎಸ್ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಉದ್ಘಾಟನೆ ಮಾಡುವರು, ಸಂಸದ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ಸುದೀರ್ ಸರಾಫ್ , ಮೋಹನ್ ಹಿರೇಮನಿ ಆಗಮಿಸುವರು.

ಪ್ರದರ್ಶನದಲ್ಲಿ ಮಾರಾಟವಾಗುವಂತಹ ವಸ್ತುಗಳು ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಸಿಗುವದರಿಂದ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ ದೊರೆಯುವಂತಾಗುತ್ತದೆ. ಈ ಮೂಲಕ ಬಡ ನೂಲುವರಿಗೆ ನೇಕಾರರಿಗೆ ಹಾಗೂ ಇತರ ಕಸಬುದಾರರಿಗೆ ನೆರವಾಗುವುದರ ಮೂಲಕ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಪತ್ರಿಕಾಗೋಷ್ಠಿ ಡಿವಿಜಿಯನ್ ಡೈರೆಕ್ಟರ್ ಎಸ್.ಎಲ್. ಮನಸೂರ್, ಕಾರ್ಯದರ್ಶಿ ಶಿವಾನಂದ ಮಠಮತ್ತಿ,‌ ರಮೇಶ ಸಿದ್ದಾ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ