ಶ್ರೀನಗರ: ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಸಿಆರ್‌ಪಿಎಫ್ ಯೋಧನೊಬ್ಬ ಬಳಿಕ ತಾನು ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.
ಶ್ರೀನಗರದ ಸೇನಾ ಕ್ಯಾಂಪ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಮೂವರು ಸಹೊದ್ಯೋಗಿಗಳ ನಡುವೆ ಅರಂಭವಾದ ಜಗಳ ಶೋಟೌಟ್ ನಲ್ಲಿ ಅಂತ್ಯಗೊಂಡಿದೆ. ಯೋಧ ಮುಖೇಶ್ ಭಾವುಕ್ ಸಹೊದ್ಯೋಗಿಗಳ ಮೇಲೂ ಗುಂದು ಹಾರಿಸಿ ತಾನೂ ಶೂಟೌಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಸಿಆರ್‌ಪಿಎಫ್‌ನ 29 ಬೆಟಾಲಿಯನ್‌ನ ಪಂಥಾ ಚೌಕ್ ಕ್ಯಾಂಪ್‌ನಲ್ಲಿ ಕೆಲ ವಿಚಾರಗಳ ಕುರಿತು ಅವರ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಭುವಕ್ ತನ್ನ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಬಳಿಕ ತಾನೂ ಕೂಡ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ.
ಘಟನೆಯಲ್ಲಿ ಇಬ್ಬರು ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸಿಆರ್‌ಪಿಎಫ್ ತನಿಖೆ ನಡೆಸುವಂತೆ ಆದೇಶಿಸಿದೆ.
CRPF jawan, shoots self, after firing at colleagues