ದೇಹದಾರ್ಡ್ಯ, ಪೂರಕ ಪೊಷಕಾಂಶ ಆಹಾರ ಹಾಗೂ ಸೌಂದರ್ಯ ವರ್ದಕ ಆಹಾರ ಉತ್ಪನ್ನಗಳ ಮಾರಾಟ ಮಾಡುವ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಮಳಿಗೆ ಬೆಂಗಳೂರಿನ ಬಸವನಗುಡಿಯಲ್ಲಿ  ಕಾರ್ಯಾರಂಭ ಮಾಡಿದೆ

 

ಪ್ರದೇಶ ಕಾಂಗ್ರೇಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸತ್ ಸದಸ್ಯ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಅರ್ಷದ್ ರಿಜ್ವಾನ್, ರೂಪದರ್ಶಿ ಮಯೂರಿ ಶಾ ಅವರು ವಿಟಮಿನ್ ಬೆರಿ ಮಳಿಗೆಯನ್ನು ಉದ್ಘಾಟಿಸಿದರು.

ಸಂಪೂರ್ಣವಾಗಿ ನೈಸರ್ಗಿಕವಾಗಿರುವ ಆರೋಗ್ಯ ವರ್ಧಕ, ದೇಹದಾರ್ಡ್ಯ, ಪೂರಕ ಪೊಷಕಾಂಶ ಒದಗಿಸುವ ಆಹಾರ ಹಾಗೂ ಸೌಂದರ್ಯ ವರ್ಧಕ ಸಾಧನಗಳನ್ನು ಈ ಮಳಿಗೆಯಲ್ಲಿ ಮಾರಾಲಾಗುತ್ತಿದ್ದು.  ಈ ರೀತಿಯ ಆಹಾರ ಉತ್ಪನ್ನ ಮಾರಾಟ ಮಾಡುವ ಪ್ರಥಮ ಮಳಿಗೆಯಾಗಿದ್ದು. ಭವಿಷ್ಯದಲ್ಲಿ ಬೆಂಗಳೂರಿನಾದ್ಯಂತ ಇನ್ನೂ ಹತ್ತು ಮಳಿಗೆ ಆರಂಭಿಸುವ ಗುರಿಹೊಂದಲಾಗಿದೆ ಎಂದು ವಿಟಮಿನ್ ಬೆರಿ ಮಳಿಗೆಯ ಮುಖ್ಯಸ್ಥ ವಿಜಯರಾಜ್ ಹೇಳಿದರು.

ಮಳಿಗೆ ಉದ್ಘಾಟನೆ ಮಾಡಿದ ನಂತರ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಮಯೂರಿ ಷಾ.  ದೇಹದ ಸೌಂದರ್ಯ ವರ್ಧನೆ ಮಾಡಿಕೊಳ್ಳಲು ಹಾಗೂ ಸದೃಢ ಹಾಗೂ ಆರೋಗ್ಯವಂತ ದೇಹ  ಹೊಂದಲು ಇಲ್ಲಿಯ ಉತ್ಪನ್ನಗಳು ಪೂರಕವಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಗುಣ ಮಟ್ಟದ ನೈಸರ್ಗಿಕ ಆಹಾರ ಉತ್ಪನ್ನ ಮತ್ತು ಸೌಂದರ್ಯ ವರ್ಧಗಳು ಇಲ್ಲಿ ಲಭ್ಯವಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ