ಸಿಡ್ನಿ: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಫಾಲೋ ಆನ್ ಭೀತಿ ಎದುರಿಸುತ್ತಿದ್ದು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿದೆ.
ಎರಡನೇ ದಿನದಾಟದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 24 ರನ್ಗಳಿಸಿತ್ತು.
ಮೂರನೇ ದಿನದಾಟದಲ್ಲಿ ಮುಂದುವರೆಸಿದ ಆಸ್ಟ್ರೇಲಿಯಾ ಕುಲ್ದೀಪ್ ಮತ್ತು ರವೀಂದ್ರ ಜಡೇಜಾ ಅವರ ಸಂಘಟಿತ ದಾಳಿಗೆ ತತ್ತರಿಸಿ ಹೋಯ್ತು.
ಮೊದಲ ಅವಧಿಯಲ್ಲಿ ಚೆನ್ನಾಗಿ ಆಡಿದ್ದ ತಂಡದ ಓಪನರ್ಗಳಾದ ಮಾರ್ಕಸ್ ಹ್ಯಾರಿಸ್ (75), ಉಸ್ಮಾನ್ ಖ್ವಾಜಾ(27) ಎರಡನೇ ಅವಧಿಯಲ್ಲಿ ಕುಲ್ದೀಪ್, ರವೀಂದ್ರ ಜಡೇಜಾ ಸ್ಪಿನ್ ಮೋಡಿಗೆ ಬಲಿಯಾದ್ರು. ಮೂರನೇ ಕ್ರಮಾಂಕದಲ್ಲಿ ಬಂದ ಲಾಬುಸ್ಚಾಗ್ನೆ 38, ಶಾನ್ ಮಾರ್ಷ್ 8, ಟ್ರಾವೆಸ್ ಹೆಡ್ 20, ಹಾನ್ಸ್ಕಮ್ ಅಜೇಯ 28, ಟಿಮ್ 5, ಪ್ಯಾಟ್ ಕಮಿನ್ಸ್ ಅಜೇಯ 25 ರನ್ ಗಳಿಸಿದ್ರು. ದಿನದಾಟದ ಅಂತ್ಯದಲ್ಲಿ ಮಂದ ಬೆಳಕಿನ ಇನ್ನು 16.3 ಓವರ್ ಬಾಕಿ ಇರುವಂತೆ ಮಂದ ಬೆಳಕಿನ ಕಾರಣ ಪಂದ್ಯವನ್ನ ಸ್ಥಗಿತಗೊಳಿಸಲಾಯಿತು.
ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3, ರವೀಂದ್ರ ಜಡೇಜಾ 2 ಮತ್ತು ಮೊಹ್ಮದ್ ಶಮಿ 1 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯಲು ಇನ್ನು 386 ರನ್ಗಳು ಅಗತ್ಯವಿದ್ದು ನಾಲ್ಕು ವಿಕೆಟ್ಗಳಿವೆ.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 622/7 ಡಿಕ್ಲೇರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 236/6