ಚಾಮರಾಜನಗರ: ವಿಧಾನಸೌಧದಲ್ಲಿ ಶುಕ್ರವಾರ ಮೋಹನ್ ಎಂಬ ವ್ಯಕ್ತಿ ಬಳಿ ಸಿಕ್ಕಿದ್ದ ಹಣಕ್ಕೂ ನನಗೂ ಸಂಬಂಧವಿಲ್ಲ. ಆತನ ನಮ್ಮ ಕಚೇರಿಯ ಸಿಬ್ಬಂದಿಯಲ್ಲ ಈ ಕುರಿತು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನನ್ನ ಕಚೇರಿಯಲ್ಲಿ ಮಂಜುನಾಥ ಮತ್ತು ಕೃಷ್ಣಪ್ಪ ಎಂಬ ಇಬ್ಬರು ಪಿಎಗಳಿದ್ದರು. ಮಂಜುನಾಥ ನನ್ನ ಸಹಿಯನ್ನು ಫೋರ್ಜರಿ ಮಾಡಿದ್ದ. ಇದರಿಂದ ಅವರಿಬ್ಬರನ್ನು ಕೆಲಸದಿಂದ ತೆಗೆದು ಹಾಕಿದ್ದೆ. ನಿನ್ನೆ ಕಚೇರಿಗೆ ಕೃಷ್ಣಪ್ಪ ಬಂದಿರುವ ಮಾಹಿತಿ ಇದೆ. ಈ ಘಟನೆಯಿಂದಾಗಿ ಇವರ ಮೇಲೆ ನನಗೆ ಅನುಮಾನವಿದೆ ಎಂದರು.
ಇನ್ನು ಹಣದ ಸಮೇತ ಸಿಕ್ಕಿಬಿದ್ದ ಮೋಹನ್ ನನ್ನ ಪಿಎ ಅಲ್ಲ. ಆತ ಟೈಪಿಸ್ಟ್. ಅವನನ್ನು ನಾನು ನೋಡಿಯೇ ಇಲ್ಲ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ ಎಂದರು.
ಹಣಕ್ಕೂ ಸಚಿವರಿಗೂ ಎನು ಸಂಬಂಧ?
ಸಚಿವರ ಕಚೇರಿಯಲ್ಲಿ ಅನೇಕ ಜನರು ಇರುತ್ತಾರೆ. ಅವರ ಬಳಿ ಹಣ ಸಿಕ್ಕರೆ ಸಚಿವರು ಏನು ಮಾಡುತ್ತಾರೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ