ಬೆಂಗಳೂರು. ಜ.2-ಮೂಲತಃ ನೇಪಾಳದ ಮಹೇಶ್ ಕಪಾಡಿ (25) ಮೃತಪಟ್ಟ ಸೆಕ್ಯೂರಿಟಿಗಾರ್ಡ್.ವಿಜಯನಗರದಲ್ಲಿ ವಾಸವಾಗಿದ್ದ ಮಹೇಶ್ ಕಪಾಡಿ ಕೆಲಸ ಮುಗಿಸಿಕೊಂಡು ನಿನ್ನೆ ಬೆಳಗಿನ ಜಾವ 2.20ರಲ್ಲಿ ವೈಟ್ಫೀಲ್ಡ್ ಮುಖ್ಯರಸ್ತೆ ಮೂಲಕ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು.
ತಕ್ಷಣ ಇವರಿಗೆ ಕೊಲಂಬಿಯಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಸಂಜೆ 7.30ರಲ್ಲಿ ಮೃತಪಟ್ಟಿದ್ದಾರೆ.
ವೈಟ್ಫೀಲ್ಡ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರು.