ಒಂದೇ ದಿನದಲ್ಲಿ ದಾಖಲೆಯ ತೆರಿಗೆ ಸಂಗ್ರಹ ಮಾಡಿದ ಬಿಬಿಎಂಪಿ

ಬೆಂಗಳೂರು, ಜ.1- ವರ್ಷಾಂತ್ಯದ ದಿನ ಪಾಲಿಕೆಗೆ ತೆರಿಗೆ ಹರಿದು ಬಂದಿದೆ. ವರ್ಷದ ಕೊನೆಯ ದಿನವಾದ ಡಿ.31ರ ಒಂದೇ ದಿನ 12.5 ಕೋಟಿ ರೂ. ದಾಖಲೆಯ ತೆರಿಗೆ ಸಂಗ್ರಹವಾಗಿದೆ. ಸಿಲಿಕಾನ್ ಸಿಟಿಯ ನಾಗರಿಕರು ವರ್ಷದ ಕೊನೆಯ ದಿನದಲ್ಲಿ ತೆರಿಗೆ ಭಾರೀ ಮೊತ್ತದ ತೆರಿಗೆ ಪಾವತಿಸಿದ್ದಾರೆ.

ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದ ವೇಳೆಗೆ 3 ಸಾವಿರ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಬೇಕಿದೆ. ಈಗಾಗಲೇ 2220 ಕೋಟಿ ರೂ.ಗಳನ್ನು ಸಂಗ್ರಹ ಮಾಡಲಾಗಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದ್ದಾರೆ.

ಬಾಕಿ ಉಳಿದಿರುವ ತೆರಿಗೆಯನ್ನು ಮಾರ್ಚ್ ಅಂತ್ಯದ ವೇಳೆಗೆ ಸಂಗ್ರಹಿಸಿ ಶೇ.100ಕ್ಕೆ 100ರಷ್ಟು ತೆರಿಗೆ ಸಂಗ್ರಹದ ಗುರಿ ಸಾಧಿಸುವುದಾಗಿ ಹೇಳಿದ್ದಾರೆ.

16.63 ಲಕ್ಷ ಆಸ್ತಿಗಳಿಂದ ಈಗಾಗಲೇ ತೆರಿಗೆ ಸಂಗ್ರಹ ಮಾಡಲಾಗಿದೆ. ಮಾರ್ಚ್ ಅಂತ್ಯದವರೆಗೆ ತೆರಿಗೆ ಕಟ್ಟಲು ಅವಕಾಶವಿದೆ. ನಗರ ವಾಸಿಗಳು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಅಧಿಕಾರಿಗಳು ಕೂಡ ತೆರಿಗೆ ಸಂಗ್ರಹದಲ್ಲಿ ಅಹರ್ನಿಷಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಹೊಸ ವರ್ಷದ ಮೊದಲ ದಿನವಾದ ಇಂದು ಕಂಟ್ರೋಲ್ ರೂಮ್‍ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಹೊಸ ವರ್ಷಾಚರಣೆ ವೇಳೆ ಬಂದಿರುವ ದೂರುಗಳ ಬಗ್ಗೆ ಪರಿಶೀಲನೆ ಮಾಡಿದರು. ಎಲ್ಲ ಎಂಟು ಜೋನ್‍ಗಳಿಗೆ ಕರೆ ಮಾಡಿ ಮಾಹಿತಿ ಪಡೆದರು. ಸಿಬ್ಬಂದಿ ವರ್ಗದವರಿಗೂ ಶುಭಾಶಯ ಕೋರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ