ಕುಣಿಗಲ್: ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಮಾಜಿ ಸಿ.ಎಂ.ಕುಮಾರಸ್ವಾಮಿ ವಿಕಾಸಪರ್ವಯಾತ್ರೆ ಸಮಾವೇಶದಲ್ಲಿ ಮಾತನಾಡಿ,
ಸಿ.ಎಂ.ಸಿದ್ದರಾಮಯ್ಯ 15 ಲಕ್ಷ ಮನೆ ಕಟ್ಟಿಸಿದ್ದೇನೆ ಎಂದು ಹೇಳುತ್ತಾರೆ, ಅದರೆ ಅವರ ಪ್ರತಿನಿಧಿಸುವ ವರುಣ ಕ್ಷೇತ್ರದಿಂದಲೇ
ನನಗೆ ಮನೆ ಬೇಕು ಎಂದು ನನಗೆ ಪೋನ್ ಮಾಡಿದ್ದರು ಎಂದು ಹೇಳಿದರು.
ರ್ಯೆತರ ಸಾಲ ಮನ್ನಾ ಮಾಡಿದ್ದೆವೆ ಎಂದು ನೆಪಕ್ಕೆ ಹೇಳುತ್ತಾರೆ, ಜೂನ್ನಲ್ಲಿ ಮನ್ನಾ ಆಗುತ್ತದೆ ಎಂದು ಹೇಳುತ್ತಾರೆ, ಅದರೆ ಜೂನ್ನಲ್ಲಿ ಭೇರೆ ಸರ್ಕಾರವಿರುತ್ತದೆ ಎಂದು ಹೇಳಿದರು. ಅ ದುಡ್ಡನ್ನು ಚುನಾವಣೆಗೆ ಉಪಯೋಗಿಸುತ್ತಾರೆ, ನಮ್ಮದು ರ್ಯೆತರ ಕಷ್ಟಕ್ಕೆ ಸ್ಪಂದಿಸುವ
ಜಾಯಾಮಾನವಾಗಿದೆ ಎಂದು ಹೇಳಿದರು. ಅವರಿಗೆ ಅಧಿಕಾರಿಗಳನ್ನು ಡೀಲ್ ಮಾಡುವುದು ಕರಗತವಾಗಿದೆ, ನಾನು ಅವರಿಗೆ ಪಾಠ ಹೇಳುವಷ್ಟು ದೊಡ್ಡ ಮನುಷ್ಯನಲ್ಲ ಎಂದು ಹೇಳಿದರು.