ಜ.8ರಿಂದ ಜ.10ರವರೆಗೆ ನಗರದಲ್ಲಿ ಭಾರತದ ಸಮವಸ್ತ್ರ, ಗಾರ್ಮೆಂಟ್ಸ್ ಮತ್ತು ಪ್ಯಾಬ್ರಿಕ್ ಉತ್ಪಾದಕರ ಮೇಳ

ಬೆಂಗಳೂರು, ಡಿ.30- ಭಾರತದ ಸಮವಸ್ತ್ರ, ಗಾರ್ಮೆಂಟ್ ಮತ್ತು ಫ್ಯಾಬ್ರಿಕ್ ಉತ್ಪಾದಕರ ಮೇಳ 2019ರ 3ನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಜ.8ರಿಂದ10ರ ವರೆಗೆ ನಡೆಯಲಿದೆ.

ಘೋಷಿಸಲು ಸೋಲಾಪುರ ಗಾರ್ಮೆಂಟ್ ಉತ್ಪಾದಕರ ಸಂಘಟನೆ ಡಾ.ಪ್ರಭಾಕರ ಕೋರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೀಣ್ಯ ಮೆಟ್ರೋ ಕೇಂದ್ರದ ಕನ್ವೆನ್ಷನ್ ಸೆಂಟರ್ ಸಮೀಪ ಮೇಳ ಆಯೋಜಿಸಲಾಗಿದೆ ಎಂದರು.

ಅಂದು ಬೆಳಗ್ಗೆ 10ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಮೇಳ ನಡೆಯಲಿದೆ.ಜ.8ರಂದು ಮಹಾರಾಷ್ಟ್ರದ ಜವಳಿ ಸಚಿವ ಸುಭಾಷ್ ದೇಶ್‍ಮುಖ್, ಮಹಾರಾಷ್ಟ್ರದ ಜವಳಿ ರಾಜ್ಯ ಸಚಿವ ಅರ್ಜುನ್ ಖೋಟ್ಕರ್, ಭಾರತ ಸರ್ಕಾರದ ಜವಳಿ ನಿರ್ದೇಶಕ ಸುಶೀಲ್ ಗಾಯಕ್ವಾಡ್, ಮಹಾರಾಷ್ಟ್ರ ಸರ್ಕಾರದ ಜವಳಿ ಇಲಾಖೆಯ ಕಾರ್ಯದರ್ಶಿ ಅತುಲ್ ಪಟ್ನೆ ಹಾಜರಿರಲಿದ್ದಾರೆ ಎಂದು ತಿಳಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ