ಪಿಸಿಒಎಸ್ ಈ ಕಾಲದ ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ. 16-35 ವಯಸ್ಸಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ.
ಸ್ತ್ರೀಯರು ಮುಟ್ಟಾದ 11-14 ನೇ ದಿನಗಳಲ್ಲಿ ಬಲ ಅಥವ ಎಡ ಅಂಡಾಶಯದಿಂದ ಯಾವುದಾದರು ಒಂದು ಅಂಡಾಣು ಬಿಡುಗಡೆಯಾಗುತ್ತದೆ. ಆದರೆ ಯಾರಲ್ಲಿ ಪಿಸಿಒಎಸ್ ಸಮಸ್ಯೆ ಇರುತ್ತದೆಯೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೆ ಅಲ್ಲಿಯೇ ಅಪರಿಪಕ್ವವಾಗಿ ಅಂಡಾಣು ನೀರಿನ ಗುಳ್ಳೆಯಂತೆ ಅಂಡಕೋಶದ ಪದರದ ಮೇಲೆ ಉಳಿದು ಹೋಗುತ್ತದೆ.
ಪಿಸಿಒಎಸ್ ಸಮಸ್ಯೆಗೆ ಕಾರಣ:-
- ಅಧಿಕ ಒತ್ತಡ
- ಹಾರ್ಮೋನ್ ಅಸಮತೋಲನ
- ಸರಿಯಾದ ಜೀವನಶೈಲಿ ಇಲ್ಲದಿದ್ದಲ್ಲಿ
- ನಿತ್ಯ ತಡವಾಗಿ ಮಧ್ಯರಾತ್ರಿ ಮಲಗುವುದು ಹಾಗು ಬೆಳಗೆ ತಡವಾಗಿ ಸೂಯರ್ೋದಯವಾದ ನಂತರ ಏಳುವ ಅಭ್ಯಾಸದಿಂದ
- ಹೆಚ್ಚು ಕರೆದ ಆಹಾರ, ಸಿಹಿ ತಿನಿಸು ಹಾಗು ಅತಿ ಹೆಚ್ಚು ಆಹಾರ ಸೇವನೆಯಿಂದ
- ಸದಾ ಕುಳಿತು ಕೆಲಸ ಮಾಡುವುದರಿಂದ
- ಅನುವಂಶಿಕ
ಪಿಸಿಒಎಸ್ ಲಕ್ಷಣಗಳು:-
- ಋತು ಚಕ್ರದಲ್ಲಿ ಏರುಪೇರಿ.
- ಋತು ಚಕ್ರ ಸರಿಯಾಗಿ ಆದರೂ ಕೆಲವೊಮ್ಮೆ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು.
ಋತುಚಕ್ರದ ಸಮಯದಲ್ಲಿ ತೀವ್ರವಾದ ನೋವು. - ಸೆರಿಯಾಗಿ 28-32 ದಿನಗಳಿಗೆ ಮುಟ್ಟಾಗದಿರುವುದು.
- ಮುಟ್ಟಾದಲ್ಲಿ ಕಡಿಮೆ ರಕ್ತಸ್ರಾವ.
- ದೇಹದ ತೂಕ ಹೆಚ್ಚಾಗುವುದು.
- ಮುಖದ ಮೇಲೆ, ಶರೀರದ ಮೇಲೆ ಕೂದಲು ಹೆಚ್ಚಾಗುವುದು.
- ತಲೆಕೂದಲು ಉದುರುವುದು.
ಪಿಸಿಒಎಸ್ ಸಮಸ್ಯೆ ಇರುವವರು ಮೊದಲು ತಮ್ಮ ದಿನಚರ್ಯ, ರಾತ್ರಿ ಚರ್ಯ, ಆಹಾರದ ಬದಲಾವಣೆಯನ್ನು ಮಾಡಿಕೂಳ್ಳಬೇಕು. ತಮ್ಮ ದಿನಚರ್ಯದಲ್ಲಿ ನಿತ್ಯ ವ್ಯಾಯಾಮ, ಯೋಗ, ದ್ಯಾನವನ್ನು ಅಲವಡಿಸಿಕೂಳ್ಳಬೇಕು.
ಪಿಸಿಒಎಸ್ ಸಮಸ್ಯೆಗೆ ಸುಲಭವಾಗಿ ಮನೆಯಲ್ಲೇ ಮಾಡಿಕೂಳ್ಳ ಬಹುದಾದ ಮನೆಮದ್ದು ಹೀಗಿವೆ:-
1.ಶತಾವರಿ-
ಶತಾವರಿಯಲ್ಲಿ ಹೆಚ್ಚು ವಿಟಾಮಿನ್ ಏ, ಬಿ, ಬಿ2, ಸಿ, ಇ, ಫೋಲಿಕ್ ಆಸಿಡ್ ಹಾಗು ಮೆಗನೀಸಿಯಮ್, ಫಾಸ್ಫರಸ್, ಕ್ಯಾಲ್ಸಿಯಮ್ ಹಾಗು ಕಬ್ಬಿಣದ ಅಂಶ ಇರುತ್ತದೆ. 1 ಚಮಚ ಶತಾವರಿ ಚೂರ್ಣವನ್ನು, 1 ಚಮಚ ಜೇನುತುಪ್ಪದಲ್ಲಿ ಸೇರಿಸಿ ನಿತ್ಯ ಸೇವಿಸಿದಲ್ಲಿ ಪಿಸಿಒಎಸ್ ಸಮಸ್ಯ ಕ್ರಮೇಣ ಕಡಿಮೆಯಾಗುತ್ತದೆ.
2.ಅರಿಶಿಣ-
ಅರಿಶಿಣ ಶರೀರದಲ್ಲಿ ಇನ್ಸುಲಿನ್ ರೆಸಿಸ್ಟೇನ್ಸ್ ಹೆಚ್ಚು ಮಾಡುತ್ತದೆ ಹಾಗು ಶರೀರವನ್ನು ಡಿಟಾಕ್ಸ ಮಾಡಲು ಅರಿಶಿಣ ಅನುಕೂಲಕಾರಿ. ಆಹಾರ ತಯಾರಿಕೆಯಾಗುವಾಗ 1/4 ಚಮಚ ಅರಿಶಿಣ ಸೇರಿಸಿ ಸೇವಿಸುವುಸುದು ಉತ್ತಮ.
3.ಲೋದ್ರ-
ಲೋದ್ರದಲ್ಲಿ ಗ್ಲೂಕೋಸೈಡ್ಸ್ ಹೆಚ್ಚಿರುವ ಕಾರಣದಿಂದಾಗಿ ಅಂಡಾಣುವಿನಲ್ಲಿ ಉತ್ಪತ್ತಿಯಾಗುವ ಹೊಮರ್ೋನ್ನು ಸೆರಿಮಾಡಲು ಅನುಕೂಲಕಾರಿ. 1 ಚಮಚ ಲೋದ್ರ ಚೂರ್ಣವನ್ನು 200 ಎಮ್.ಎಲ್ ನೀರಿನ್ಲಿ ಸೇರಿಸಿ ಚೆನ್ನಾಗಿ ಕುದಿಸಿ 100 ಎಮ್.ಎಲ್ನಷ್ಟು ಇಳಿಸಬೇಕು. ನಂತರ ಈ ಕಷಾಯವನ್ನು ಶೋದಿಸಿ ನಿತ್ಯ ಬೆಳಗೆ ಖಾಲಿಹೂಟ್ಟೆಯಲ್ಲಿ ಸೇವಿಸುವುದರಿಂದ ಪಿಸಿಒಎಸ್ ಸಮಸ್ಯೆ ದೂರವಾಗುತ್ತದೆ.
4.ಅಶೋಕ-
ಅಶೋಕದಲ್ಲಿರು ಐನ್ಟೀ ಇನ್ಫ್ಲೈಮಟೊರಿ(ಊತನಿವಾರಿಸುವ)ಯ ಗುಣವಿರುವ ಕಾರಣದಿಂದ ಎಂಡೊಮೆಟ್ರಿಯಮ್ ನಲ್ಲಿನ ಸಮಸ್ಯೆಯನ್ನು ಗುಣಮಾಡುತ್ತದೆ ಹಾಗು ಈಸ್ಟ್ರೊಜೆನ್ ಹೂಮರ್ೂನ್ನನ್ನು ಸೆರಿಯಾದ ಮಟ್ಟದಲ್ಲಿರಿಸುತ್ತದೆ.
ಮೊದಲೆ ತಿಳಿಸಿದ ಹಾಗೆ ಪಿಸಿಒಎಸ್ ಸಮಸ್ಯ ನಿವಾರಿಸಲು ಆಹಾರ, ಔಷದದ ಜೋತೆ ವ್ಯಾಯಾಮ, ವಾಯುವಿಹಾರ, ಯೋಗಾಸನ ಹಾಗು ಪ್ರಾಣಾಯಾಮ ಅತ್ಯಾವಶ್ಯಕ. ಪೆಸಿಒಎಸ್ ನಿವಾರಿಸಲು ಪ್ರತಿ ನಿತ್ಯ ಈ ಕೆಳಗೆ ತಿಳಿಸಿರುವ ಆಸನಗಳನ್ನು ಅಭ್ಯಾಸಿಸಬೇಕು.
- ಸೂರ್ಯನಮಸ್ಕಾರ
- ಸರ್ವoಗಾಸನ
- ಪದ್ಮಾಸನ
- ಸೇತುಬಂಧಾಸನ
- ಬದ್ದಕೊಣಾಸನ
ಪ್ರಾಣಾಯಾಮ– ನಿತ್ಯ 10-15 ನಿಮಿಷ ನಾಡಿ ಶೋದನ ಪ್ರಾಣಾಯಾಮವನ್ನು ಅಭ್ಯಾಸಿಸಬೇಕು.
ಲೇಖಕರು
ಡಾ. ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ( ಎ.ಎಮ್),ಎಮ್.ಎಸ್ಸಿ(ಯೋಗ)
ದೂರವಾಣಿ-9743857575
ವೆಬ್ಸೈಟ್-www.yogaforpregnant.com
ಆಯುರ್ವೇಧದ ಹಾಗು ಯೋಗದ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಸಾಧನೆ ಮಾಡುತ್ತಿರುವ ಡಾ. ಸಿಂಧು ಪ್ರಶಾಂತರವರು ಹೆಸರಾಂತ ಆಯುರ್ವೇಧದ ತಙ್ಞೆ. ಕ್ರಾನಿಕ್ ಡಿಸೀಸ್(ಧೀರ್ಘಕಾಲದ ಕಾಯಿಲೆ), ಪ್ರಿವೆಂಟಿವ್ ಕೇರ್( ರೋಗ ನಿವಾರಣೆ ಹಾಗು ರೋಗಿಯ ಆರೈಕೆ), ಆಯುರ್ವೇಧದ ಪಥ್ಯಾ/ಅಪಥ್ಯಾ, ಒತ್ತಡ ನಿರ್ವಹಣೆ, ಲೈಫ್ ಸ್ಟೈಲ್ ಮ್ಯಾನೆಜ್ಮೆಂಟ್ಗಳ ಬಗ್ಗೆ ವಿಸ್ತಾರವಾದ ಅನುಭವವಿದ್ದು, ಹಲವಾರು ಅಸ್ವಸ್ಥರನ್ನು ಗುಣಮುಖವಾಗಿಸಿದ್ದಾರೆ ಹಾಗು ಗರ್ಭಿಣಿಯರ ಯೋಗದ ಬಗ್ಗೆ ವ್ಯಾಪಕ ಅಧ್ಯಯನ ಮಾಡಿ ಅತಿ ಶೀರ್ಘದಲ್ಲಿಯೇ ಅದರ ಮೇಳೆ ಬರೆದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.