ಬೆಂಗಳೂರು,ಡಿ.28- ಎಸಿಬಿ ದಾಳಿಗೊಳಗಾದ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಆರ್.ಶ್ರೀಧರ್ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಪದೇ ಪದೇ ಎಸಿಬಿ ಅಧಿಕಾರಿಗಳು ತನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಶ್ರೀಧರ್ ಅಲವತ್ತುಕೊಂಡಿದ್ದಾರೆ.
ಈ ಹಿಂದೆಯೂ ತಮ್ಮ ಮನೆ, ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು.10 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾಯಿತು.ಜೈಲಿನಿಂದ ಈಗಷ್ಟೇ ಬಿಡುಗಡೆಯಾಗಿದ್ದೇನೆ. ಆಗಲೇ ಮತ್ತೊಮ್ಮೆ ಎಸಿಬಿ ದಾಳಿ ನಡೆಸುವ ಮೂಲಕ ತನ್ನನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಶ್ರೀಧರ್ ಗರಂ ಆಗಿದ್ದಾರೆ.