ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ವರಿಷ್ಠರಿಗೆ ದೊಡ್ಡ ಸವಾಲಾಗಿದ್ದ ಖಾತೆ ಹಂಚಿಕೆಗೆ ಕೊನೆಗೂ ಅಂತಿಮವಾಗಿದೆ. ಇನ್ನು ಪ್ರಭಾವಿ ಖಾತೆಗಳನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಿದ್ದ ನಾಯಕರು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಖಾತೆಯನ್ನು ನೂತನ ಸಚಿವರಿಗೆ ಬಿಟ್ಟುಕೊಟ್ಟಿದ್ದಾರೆ.
ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಬಳಿಯಿದ್ದ ಗೃಹಖಾತೆಯನ್ನು ಕೊನೆಗೂ ಅವರಿಂದ ಕಿತ್ತುಕೊಳ್ಳಲಾಗಿದೆ. ಡಿಸಿಎಂ ಪಟ್ಟದ ಜೊತೆ ಅವರಿಗೆ ಬೆಂಗಳೂರು ಅಭಿವೃದ್ಧಿ ಹಾಗೂ ಕಾನೂನು, ಸಂಸದೀಯ ಖಾತೆಯನ್ನು ನೀಡಲಾಗಿದೆ.
ಸಚಿವೆ ಜಯಮಾಲ ಬಳಿಯಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆಯನ್ನು ಅವರಿಂದ ಕಿತ್ತುಕೊಂಡು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ಗೆ ನೀಡಲಾಗಿದೆ. ಇದರ ಜೊತೆ ಅವರಿಗೆ ವಾರ್ತಾ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಬಳಿ ಕಂದಾಯ ಇಲಾಖೆಇದ್ದು, ಕೆ.ಜೆ.ಜಾರ್ಜ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಹೊಣೆ ಹೊತ್ತುಕೊಂಡಿದ್ದಾರೆ.
ಕೃಷ್ಣ ಬೈರೇಗೌಡ ಗ್ರಾಮೀಣಾಭಿವೃದ್ಧಿ, ಯು.ಟಿ.ಖಾದರ್ ನಗರಾಭಿವೃದ್ಧಿ ಇಲಾಖೆ, ಜಯಮಾಲಾ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಹೊಂದಿದ್ದಾರೆ.
ಇನ್ನು ನೂತನವಾಗಿ ಸಚಿವರಾದ ಎಂ.ಬಿ.ಪಾಟೀಲ್ಸಿದ್ದರಾಮಯ್ಯ ಅವರ ಮಾತಿನಂತೆ ಕೊನೆಗೂ ಗೃಹ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಉಳಿದ ಸಚಿವರುಗಳ ಖಾತೆ ವಿವರ ಇಂತಿದೆ.
ಸತೀಶ್ ಜಾರಕಿಹೊಳಿ- ಅರಣ್ಯ, ಪರಿಸರ ಇಲಾಖೆ, ಎಂ.ಟಿ.ಬಿ. ನಾಗರಾಜ್- ವಸತಿ, ಇ.ತುಕಾರಾಂ- ವೈದ್ಯಕೀಯ ಶಿಕ್ಷಣ, ಎನ್ ಎಚ್ .ಶಿವಶಂಕರ ರೆಡ್ಡಿ- ಕೃಷಿ ಇಲಾಖೆ, ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ, ಜಮೀರ್ ಅಹ್ಮದ್- ಆಹಾರ, ನಾಗರಿಕ ಪೂರೈಕೆ, ಶಿವಾನಂದ ಪಾಟೀಲ್- ಆರೋಗ್ಯ, ಕುಟುಂಬ ಕಲ್ಯಾಣ, ವೆಂಕಟರಮಣಪ್ಪ- ಕಾರ್ಮಿಕ ಇಲಾಖೆ, ರಾಜಶೇಖರ್ ಪಾಟೀಲ್- ಗಣಿ, ಭೂವಿಜ್ಞಾನ, ಪರಮೇಶ್ವರ್ ನಾಯ್ಕ್- ಮುಜರಾಯಿ, ಕೌಶಲಾಭಿವೃದ್ಧಿ, ರಹೀಂ ಖಾನ್- ಯುವಜನ, ಕ್ರೀಡೆ, ಆರ್.ಬಿ.ತಿಮ್ಮಾಪುರ- ಬಂದರು, ಒಳನಾಡು ಸಾರಿಗೆ, ಸಕ್ಕರೆ ಖಾತೆ ಪಡೆದಿದ್ದಾರೆ.
ಖಾತೆ ಹಂಚಿಕೆ ಬಿಕ್ಕಟ್ಟಿಗೆ ಹೈ ಕಮಾಂಡ್ ಮುಕ್ತಿ ಹಾಡಿದ್ದು, ಹೊಸ ಸಚಿವರಿಗೆ ಖಾತೆ ಹಂಚಿಕೆ ಹಾಗೂ ಖಾತೆ ಮಾರ್ಪಡು ಕುರಿತು ಸಿಎಂ ಕುಮಾರಸ್ವಾಮಿಗೆ ಪತ್ರ ರವಾನಿಸಿದ್ದಾರೆ. ಈ ಪಟ್ಟಿಯನ್ನು ರಾಜ್ಯಪಾಲರಿಂದ ಒಪ್ಪಿಗೆ ಪಡೆಯಲು ರವಾನಿಸಲಾಗಿದೆ. ಇಂದು ಸಂಜೆಯೊಳಗೆ ಅಧಿಕೃತ ಘೋಷಣೆ ಹೊರಬರಲಿದೆ.