ಬೆಂಗಳೂರು, ಡಿ.27- ಆರೋಪ ಎದುರಿಸುತ್ತಿರುವ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಪರವಾಗಿರುವ ಶ್ರೀ ಅಖಿಲ ಭಾರತ ಹವ್ಯಕ ಮಹಾಸಭಾ ಇದೇ 28 ರಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಖಿಲ ಹವ್ಯಕ ಮಹಾಸಭಾ ಅಮೃತ ಮಹೋತ್ಸವ ಹಾಗೂ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರು, ಹವ್ಯಕರು ಪಾಲ್ಗೊಳ್ಳದಂತೆ ಅಖಿಲ ಹವ್ಯಕ ಒಕ್ಕೂಟ ಮನವಿ ಮಾಡಿದೆ.
ಹವ್ಯಕ ಮಹಾಸಬಾ ಇದೇ 28ರಿಂದ 30ರ ವರೆಗೆ ಅಮೃತ ಮಹೋತ್ಸವ ಮತ್ತು ಸಮ್ಮೇಳನವು ಮೂರು ದಿನಗಳ ಕಾಲ ಸಂಪೂರ್ಣವಾಗಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ನಿರ್ದೇಶನದಂತೆ ನಡೆಯುತ್ತಿದ್ದು, ಇದು ಮಠದ ಕಾರ್ಯ ಕ್ರಮವೇನೋ ಎನ್ನುವಷ್ಟರ ಮಟ್ಟಿಗೆ ನಿರ್ದೇಶಿತವಾಗಿದೆ. ಹಾಗಾಗಿ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಹವ್ಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಕೋರಿದೆ.