
ಬೆಂಗಳೂರು, ಡಿ.27- ಪೂರ್ಣಚಂದ್ರ ಬಡಾವಣೆಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಮತ್ತು ಪೂರ್ಣಚಂದ್ರ ಫೌಂಡೇಷನ್ ವತಿಯಿಂದ ಇದೇ 29ರಂದು ಮಧ್ಯಾಹ್ನ 2.30ಕ್ಕೆ ದೇವಾಲಯದ ಆವರಣದಲ್ಲಿ ವಿಶ್ವಮಾನವ ದಿನಾಚರಣೆ ಆಯೋಜಿಸಲಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಎಚ್.ಗಿರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಲೇಖಕ ರಾಜಪ್ಪ ದಳವಾಯಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಫೌಂಡೇಷನ್ ಅಧ್ಯಕ್ಷ ಎಲ್.ಭೆರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗತಜ್ಞ ಕೆ.ವಿ.ನಾಗರಾಜಮೂರ್ತಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಪ್ರಕೃತಿ ಚಿತ್ರಕಲಾ ಪ್ರದರ್ಶನ ಹಾಗೂ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಲಾಗಿದೆ.