ನವದೆಹಲಿ: ಕರ್ನಾಟಕದ ಮಹತ್ವಕಾಂಕ್ಷೆಯ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ. ತಮಿಳುನಾಡು ಸುಪ್ರೀಂಕೋರ್ಟ್ನ ನ್ಯಾಯಾಧೀಕರಣದ ತೀರ್ಪಿಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸಂಸದರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಯೋಜನೆ ವಿರೋಧಿಸಿ ವಾರದ ಹಿಂದೆಯಷ್ಟು ತಮಿಳುನಾಡು ಸಂಸದರು ಪ್ರತಿಭಟಿಸಿದ್ದರು. ಇಂದು ಕರ್ನಾಟಕದ ಸಂಸದರಾದ ಡಿ.ಕೆ. ಸುರೇಶ್, ಶೋಭಾ ಕರಂದ್ಲಾಜೆ, ಆರ್.ಧ್ರುವನಾರಾಯಣ್, ಜಿ.ಎಂ.ಸಿದ್ದೇಶ್, ಭಗವಂತ ಕೂಬಾ, ಪ್ರಕಾಶ್ ಹುಕ್ಕೇರಿ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ, ನಾಸಿರ್ ಹುಸೇನ್, ಸಚಿವ ಡಿ.ಕೆ. ಶಿವಕುಮಾರ್, ರಾಜ್ಯ ಸಭಾ ಸದಸ್ಯರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಯಾವುದೇ ಕಾನೂನಿನ ಅಡ್ಡಿ ಇಲ್ಲದಿದ್ದರೂ ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಅನಾಗತ್ಯವಾಗಿ ವಿರೋಧಿ ಧೋರಣೆ ತಳಿಯುತ್ತಿದೆ. ಇದಕ್ಕೆ ಪ್ರತಿಯಾಘಗಿ ಸದನದ ಒಳ- ಹೊರಗೂ ಹೋರಾಟ ಮಾಡುವುದಾಗಿ ರಾಜ್ಯದ ಸಂಸದರು ಹೇಳಿದ್ದರು. ಹೀಗಾಗಿ, ಇಂದು ತಮಿಳುನಾಡಿನ ನಡೆ ವಿರೋಧಿಸಿ ಮುಷ್ಕರದ ಮೂಲಕ ದೆಹಲಿ ಆಡಳಿತದ ಗಮನಸೆಳೆದರು.