ಬಂಗಾರಪೇಟೆ,ಡಿ.26- ಖಾಸಗಿ ಬಸ್ಗೆ ಬೈಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ ಬೈಕ್ ಸವಾರ ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಹೊರವಲಯದಲ್ಲಿ ನಡೆದಿದೆ.
ಬಂಗಾರಪೇಟೆಯ ವಿವೇಕಾನಂದ ನಗರದ ನಿವಾಸಿ ನೀರಜ್(20) ಮೃತ ದುರ್ದೈವಿ.
ಬೈಕ್ನಲ್ಲಿದ್ದ ಇನ್ನೋರ್ವ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಂದು ಬೆಳಗ್ಗೆ ನೀರಜ್, ಗೆಳೆಯನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಬಂಗಾರಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.