ಬೆಂಗಳೂರು, ಡಿ.24-ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು ಹಾಗೂ ನವೋದ್ಯಮಗಳಿಗೆ ಅಗತ್ಯವಾದ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಆನ್-ಗೋ ಫ್ರೇಂವರ್ಕ್ ಕಂಪನಿಯು ಕಳೆದ ತ್ರೈಮಾಸಿಕ ಅವಧಿಯಲ್ಲಿ ಶೇ.100ರಷ್ಟು ಬೆಳವಣಿಗೆಯನ್ನು ದಾಖಲಿಸಿ ಗಮನ ಸೆಳೆದಿದೆ.
ಈ ಕುರಿತು ಮಾತನಾಡಿದ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ರಾಮ ಕುಪ್ಪ, ಆನ್-ಗೋ ಫ್ರೇಂವರ್ಕ್ ಕಂಪನಿಯು ಇತ್ತೀಚಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು, ಆಹಾರ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಆರೋಗ್ಯ ಕ್ಷೇತ್ರ, ವಿಮಾ ತಂತ್ರಜ್ಞಾನ ಮತ್ತು ಹಣಕಾಸು ತಂತ್ರಜ್ಞಾನ ಸೇವೆಗಳ ಪೂರೈಕೆಯಲ್ಲಿ ತನ್ನದೇ ಛಾಪು ಮೂಡಿಸಿದೆ ಎಂದರು.
ಕಂಪನಿಯು ಒದಗಿಸುತ್ತಿರುವ ಸೇವೆಗಳು ಕೃತಕ ಬುದ್ಧಿಮತ್ತೆಯನ್ನು ಆಧರಿಸಿವೆ. ಕಡಿಮೆ ಬಂಡವಾಳ ಹೂಡಿಕೆಯಿಂದ ಸಾಧ್ಯವಾಗುತ್ತಿರುವ ಈ ಸೇವೆಗಳು ಮಾಹಿತಿ ತಂತ್ರಜ್ಞಾನ ತಂಡಗಳು, ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಸಿಬ್ಬಂದಿ ನಿಯೋಜನೆಯಂತಹ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದೆ.ಸಾಂಪ್ರದಾಯಿಕ ಮಾದರಿಯ ಪರಿಹಾರ ಕ್ರಮಗಳಿಗೆ ಹೋಲಿಸಿದರೆ ಆನ್-ಗೋ ಒದಗಿಸುತ್ತಿರುವ ಸೇವೆಗಳು ತುಂಬಾ ಕ್ಷಿಪ್ರ ಗತಿಯಲ್ಲಿ ಲಭ್ಯವಾಗುವಂತಿವೆ ಎಂದು ತಿಳಿಸಿದರು.