ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರ: ಸಾವಿನ ಸಂಖ್ಯೆ 222ಕ್ಕೆ ಏರಿಕೆ

ಜಕಾರ್ತಾ: ಇಂಡೋನೇಷ್ಯಾದಲ್ಲಿ ಸಂಭವಿಸಿದಭೀಕರ ಸುನಾಮಿ ಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 222ಕ್ಕೆ ಏರಿದ್ದು, 800ಕ್ಕೂ ಹೆಚ್ಚು ಮಂದಿ ಮಂದಿ ಕಾಣೆಯಾಗಿದ್ದಾರೆ. ಕಡಲಿನ ಆಳದಲ್ಲಿ ಜ್ವಾಲಾಮುಖಿ ಸ್ಪೋಟಿಸಿದಾಗ ಈ ಭೂಕಂಪ ಹಾಗೂ ಸುನಾಮಿ ಉಂಟಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ತಡರಾತ್ರಿ ಅಪ್ಪಳಿಸಿದ ಸುನಾಮಿಗೆ ನೂರಾರು ಮನೆಗಳು ಮತ್ತು ಇತರ ಕಟ್ಟಡಗಳು ಕುಸಿದಿದ್ದು 584 ಮಂದಿ ಗಾಯಗೊಂಡಿದ್ದಾರೆ. ಸುಂದಾ ಜಲಸಂಧಿ ಅಂಚಿನಲ್ಲಿ ಈ ಸುನಾಮಿ ಅಪ್ಪಳಿಸಿದೆ.

ಸುಂದಾ ಜಲಸಂಧಿ ಸುತ್ತಲಿನ ಕರಾವಳಿ ಪ್ರದೇಶದ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಕಡಲ ತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 25ರ ವರೆಗೂ ಎತ್ತರದ ಅಲೆಗಳು ಅಪ್ಪಳಿಸುವ ಮುನ್ಸೂಚನೆ ನೀಡಲಾಗಿದೆ.

2004ರ ಡಿಸೆಂಬರ್ 26ರಂದು ಶಕ್ತಿಶಾಲಿ ಭೂಕಂಪದ ಬಳಿಕ ಹಿಂದೂ ಮಹಾಸಾಗರದಲ್ಲಿ ಎದ್ದ ಮಹಾ ಸುನಾಮಿಗೆ 13 ದೇಶಗಳಲ್ಲಿ 2,26,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇಂಡೋನೇಷ್ಯಾದಲ್ಲೇ 1,20,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಕ್ರಕಟಾವುನಲ್ಲಿ 1883ರಲ್ಲಿ ಸಂಭವಿಸಿದ ಸರಣಿ ಸುನಾಮಿಗೆ 36,000ಕ್ಕೂ ಹೆಚ್ಚು ಜನ ಬಲಿಯಾಗಿದ್ದರು.

ಬಂಟೇನ್ ಪ್ರಾಂತ್ಯದ ತಾಂಜುಂಗ್‌ ಲೆಸುಂಗ್‌ನಲ್ಲಿ ಭಾರೀ ಹಾನಿಯಾಗಿದ್ದು, ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ದುರಂತ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಎಂಡನ್ ಪೆರ್ಮನಾ ತಿಳಿಸಿದರು.
Tsunami in Indonesia kills at least 222 without warning

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ