ಸಂಪುಟ ವಿಸ್ತರಣೆ ಬೆನ್ನಲ್ಲೇ ಆರಂಭಗೊಂಡ ಖಾತೆ ಹಂಚಿಕೆ ಪ್ರಕ್ರಿಯೆ

ಬೆಂಗಳೂರು, ಡಿ.23- ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿದೆ.

ಮೂಲಗಳ ಪ್ರಕಾರ, ಎಂ.ಬಿ.ಪಾಟೀಲ್ ಅವರಿಗೆ ಗೃಹ ಖಾತೆ, ಸತೀಶ್ ಜಾರಕಿಹೊಳಿ-ಅರಣ್ಯ ಖಾತೆ, ರಹೀಂ ಖಾನ್-ಅಲ್ಪಸಂಖ್ಯಾತರ ಅಭಿವೃದ್ಧಿ, ಪಿ.ಟಿ.ಪರಮೇಶ್ವರ ನಾಯಕ್- ಮೂಲ ಸೌಲಭ್ಯ ಕೌಶಲ್ಯಾಭಿವೃದ್ಧಿ, ಸಿ.ಎಸ್.ಶಿವಳ್ಳಿ-ಪೌರಾಡಳಿತ, ಆರ್.ಬಿ.ತಿಮ್ಮಾಪುರ್- ವೈದ್ಯಕೀಯ ಶಿಕ್ಷಣ, ಎಂ.ಟಿ.ಬಿ.ನಾಗರಾಜ್-ನಗರಾಭಿವೃದ್ಧಿ, ಇ.ತುಕಾರಾಮ್-ಯುವಜನ ಸೇವೆ ಮತ್ತು ಕ್ರೀಡಾ ಖಾತೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ ಇರುವ ಗೃಹ-ಯುವಜನಸೇವಾ ಖಾತೆಯನ್ನು ಎಂ.ಬಿ.ಪಾಟೀಲ್ ಮತ್ತು ತುಕಾರಾಮ್ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಸಂಪುಟದಿಂದ ಕೈಬಿಡಲಾದ ಪಕ್ಷೇತರ ಶಾಸಕ ಆರ್.ಶಂಕರ್ ಬಳಿ ಇದ್ದ ಅರಣ್ಯ ಖಾತೆಯನ್ನು ಸತೀಶ್ ಜಾರಕಿಹೊಳಿಗೆ, ರಮೇಶ್ ಜಾರಕಿಹೊಳಿ ಅವರ ಬಳಿ ಇದ್ದ ಪೌರಾಡಳಿತ ಖಾತೆಯನ್ನು ಸಿ.ಎಸ್.ಶಿವಳ್ಳಿ ಅವರಿಗೆ, ಡಿ.ಕೆ.ಶಿವಕುಮಾರ್ ಬಳಿ ಇರುವ ವೈದ್ಯಕೀಯ ಕಾತೆಯನ್ನು ಆರ್.ಬಿ.ತಿಮ್ಮಾಪುರ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಅದೇ ರೀತಿ ಯು.ಟಿ.ಖಾದರ್ ಬಳಿ ಇರುವ ನಗರಾಭಿವೃದ್ಧಿ ಖಾತೆಯನ್ನು ಎಂ.ಟಿ.ಬಿ.ನಾಗರಾಜ್ ಅವರಿಗೆ, ಜಮೀರ್ ಅಹಮ್ಮದ್ ಅವರ ಬಳಿ ಇರುವ ಅಲ್ಪಸಂಖ್ಯಾತ ಖಾತೆಯನ್ನು ರಹೀಮ್ ಖಾನ್‍ಗೆ, ಪಿ.ಟಿ.ಪರಮೇಶ್ವರ್ ಅವರಿಗೆ ಮೂಲ ಸೌಲಭ್ಯ ಕೌಶಲ್ಯ ಅಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ.

ಇದರ ಜತೆಯಲ್ಲೇ ಆರ್.ವಿ.ದೇಶಪಾಂಡೆ, ಜಯಮಾಲಾ, ಕೆ.ಜೆ.ಜಾರ್ಜ್ ಸಚಿವರ ಖಾತೆಗಳಲ್ಲೂ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ