ಬೆಂಗಳೂರು, ಮಾ.10- ಸಿರಿಯಾದ ಅಮಾಯಕ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸುವುದಾಗಿ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಉಪ ಕಾರ್ಯದರ್ಶಿ ಅಬ್ದುಲ್ ಮಾಜಿದ್ ದಯೆ-ದಾಕ್ಷಿಣ್ಯಯಿಲ್ಲದೆ ತನ್ನ ಸ್ವಂತ ದೇಶದ ಮಹಿಳೆಯರನ್ನು, ಮುಗ್ದ ಮಕ್ಕಳನ್ನು ಹಾಗೂ ಅಮಾಯಕರನ್ನು ರಾಸಾಯನಿಕ ಸಿಡಿ ಮದ್ದು ಸಿಡಿಸಿ ಹತ್ಯೆಗೈದಿರುವ ಕೃತ್ಯ ಅಮಾನವೀಯ. ಇಂತಹ ಸಿರಿಯಾ ಅಧ್ಯಕ್ಷನ ಮೇಲೆ ಹಾಗೂ ಇದಕ್ಕೆ ಬೆಂಬಲಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಯುಎನ್ ಒಕ್ಕೂಟ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸದಿದ್ದರೆ ಭಾರತವೂ ಮತ್ತೊಂದು ಸಿರಿಯಾ ಆಗುವುದು ಎಂದು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.
ನಮ್ಮ ಸಂಘಟನೆ ಧರ್ಮ, ಭೇದವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ರಕ್ತದಾನ ಶಿಬಿರ, ತುರ್ತು ಪರಿಸ್ಥಿತಿಯಲ್ಲಿ ಧನ ಸಹಾಯ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ನೆರವು, ಅನಾಥರಿಗೆ ಆಶ್ರಯ ನೀಡುವಂತಹ ಕೆಲಸದಲ್ಲಿ ನಿರತವಾಗಿದೆ. ಆದರೆ, ಮುಸ್ಲಿಂ ಸಂಘಟನೆ ಎಂಬ ಮಾತ್ರಕ್ಕೆ ಆರೋಪ ಮಾಡುವುದು ಸರಿಯಲ್ಲ ಎಂದರು.