ಪ್ರಬಂಧಗಳನ್ನು ಬರೆಯುವಾಗ ವಿದ್ಯಾಥಿ೵ಗಳು ಸುಲಭವಾದ ಪದಗಳನ್ನು ಬಳಸುವಂತೆ ಕರೆ ನೀಡಿದ ಕುಲಪತಿ ಪ್ರೊ,ವೇಣುಗೋಪಾಲ್venugopal

Varta Mitra News

ಬೆಂಗಳೂರು, ಡಿ.22-ವಿದ್ಯಾರ್ಥಿಗಳು ಥೀಸಿಸ್ ಪೇಪರ್‍ಗಳನ್ನು ಬರೆಯುವಾಗ ಸುಲಭವಾದ ಪದಗಳನ್ನು ಉಪಯೋಗಿಸಿ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ವೇಣುಗೋಪಾಲ್ ಕೆ.ಆರ್. ತಿಳಿಸಿದರು.

ವಿಶ್ವವಿದ್ಯಾಲಯದ ಪೆÇ್ರ. ಕೆ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ಸಲಕರಣೆ ಕುರಿತಂತೆ ಒಂದು ದಿನದ ಮನನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಗುರುಗಳಾದ ಪೆÇ್ರ. ಕೆ.ವೆಂಕಟಗಿರಿಗೌಡ ಅವರಿಂದ ನಾನು ಹಲವಾರು ಪ್ರಬಂಧ(ಥೀಸಿಸ್)ಗಳನ್ನು ಬರೆದಿದ್ದೇನೆ ಹಾಗೂ ಅವರಿಂದ ನಾನು ಪ್ರೇರಣೆ ಪಡೆದೆ ಎಂದು ಸ್ಮರಿಸಿದರು.

ಗ್ರಂಥಪಾಲಕ ಡಾ.ಬಿ.ಆರ್.ರಾಧಕೃಷ್ಣ ಮಾತನಾಡಿ, ನಾವು ವಿದೇಶ ದೇಶಗಳಲ್ಲಿ ಮಾಡಿರುವ ಸಂಶೋಧನೆಗಳನ್ನು ಹೆಚ್ಚು ಪ್ರಮಾಣಿಕತೆ ನೀಡಿ ನಮ್ಮ ರಾಜ್ಯದ ಹಾಗೂ ರಾಷ್ಟ್ರದ ವಿದ್ಯಾರ್ಥಿಗಳ ಸಂಶೋಧನೆಗಳಿಗೆ ಪ್ರಮುಖ್ಯತೆ ನೀಡುವುದಿಲ್ಲ ಎಕೆಂದರೆ ವಿದೇಶದಿಂದಒಂದು ವಿಷಯದ ಮೇಲೆ ಪ್ರಬಂಧ ಬರೆದರೆ ಅದು ಹೆಚ್ಚು ಸೂಕ್ತ ಎಂದು ಬಹಳ ಸುಲಭವಾಗಿ ಅದನ್ನು ಒಪ್ಪಿಕೊಳುತ್ತೇವೆ. ಆದರೆ ನಮ್ಮ ಸಂಶೋಧನಾಕಾರರು ಮಾಡುವ ಕೆಲಸಗಳಿಗೆ ಹೆಚ್ಚು ಪೆÇ್ರೀ ನೀಡುವುದಕ್ಕೆ ನಾವು ಮುಂದಾಗಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಅಂಗ್ಲ ಭಾಷೆಯಲ್ಲಿ ಬರೆಯುವುದು ಸುಲಭವಲ್ಲಅದರೆ ಪ್ರಪಂಚಅಂಗ್ಲ ಭಾಷೆಯಲ್ಲಿ ಸಂಶೋದನೆಗಳನ್ನು ಬರೆಯದಿದ್ದರೆ ಅದನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಅಂಗ್ಲ ಭಾಷೆಯು ಬೇಕು ಎಂದು ಹೇಳಿದರು.

ಪ್ರಾಧ್ಯಾಪಕರಾದ ಡಾ.ಗೀತಾ ಭಾಸ್ಕರ್, ಡಾ.ಮೊಹಮ್ಮದ್‍ಅಫ್ಜಲ್ ಪಾಷ, ಗ್ರಾಮೀಣಾಭಿವೃದ್ದಿ ನಿರ್ದೇಶಕ ಡಾ.ಟಿ.ಹೆಚ್.ಮೂರ್ತಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ