ಕಣಿವೆ ರಾಜ್ಯದಲ್ಲಿ ಗುಂಡಿನ ಕಾಳಗ: ಸೇನಾ ದಾಳಿಗೆ 6 ಉಗ್ರರು ಎನ್ ಕೌಂಟರ್

ಶ್ರೀನಗರ: ಕಣಿವೆರಾಜ್ಯದಲ್ಲಿ ಇಂದು ಸಹ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರೆದಿದೆ. ಸೇನೆಯ ಗುಂಡಿನ ದಾಳಿಗೆ 6 ಉಗ್ರರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪುಲ್ವಾಮ ಜಿಲ್ಲೆಯ ಟ್ರಾಲ್ನಲ್ಲಿ ಇಂದು ಸೇನಾ ಕಾರ್ಯಾಚರಣೆ ನಡೆಸಲಾಯ್ತು. ವೇಳೆ ಉಗ್ರರು ಸಹ ಗುಂಡಿನ ಮಳೆಗೆರೆದಿದ್ದಾರೆ. ಸೇನೆ ನಡೆಸಿದ ದಾಳಿಯಲ್ಲಿ 6 ಉಗ್ರರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆಯಿಂದಲೇ ಆರಂಭವಾದ ಸೇನಾ ಕಾರ್ಯಾಚರಣೆ ಈಗ ಅಂತ್ಯಗೊಂಡಿದೆ ಎನ್ನಲಾಗ್ತಿದೆ. ವರ್ಷವೇ ಅತಿಹೆಚ್ಚು ಉಗ್ರರನ್ನು ಹೊಡೆದುರುಳಿಸಿರುವ ಭಾರತೀಯ ಸೇನೆ, ಉಗ್ರರ ಬೇಟೆಯನ್ನು ಮುಂದುವರೆಸುತ್ತಲೇ ಇದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ