ಇಂದೋರ್ :ಮಾ-10: ವಸತಿ ಪ್ರದೇಶವೊಂದಕ್ಕೆ ನುಗ್ಗಿ ಬಂದ ಚಿರತೆ ಮೂವರನ್ನು ಗಾಯಗೊಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಈಗ ವೈರಲ್ ಆಗಿದೆ.
ಇಂದೋರ್ ಪಲಾಹರ್ ನಗರದ ವಸತಿ ಕಾಲನಿಗೆ ನುಗ್ಗಿ ಬಂದ ಚಿರತೆ ಜನರನ್ನು ಭಯ ಭೀತಗೊಳಿಸಿದ್ದು, ಕೆಲವರ ಮೇಲೆ ಹಾರಿ ಗಾಯಗೊಳಿಸಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಪ್ರವೇಶಿಸಿ ಅಲ್ಲಿ ಸುಮಾರು 3 ತಾಸುಗಳ ಕಾಲ ಓಡಾಡಿತು.
ಚಿರತೆಯನ್ನು ಹಿಡಿಯಲು ಬಂದ ಇಬ್ಬರು ಅರಣ್ಯ ಇಲಾಖೆ ಸಿಬಂದಿಗಳು ಮತ್ತು ಓರ್ವ ನಾಗರಿಕ ಚಿರತೆ ದಾಳಿಗೆ ಗಾಯಗೊಂಡಿದ್ದಾರೆ. ಅಡಗಿ ಕುಳಿತ ಚಿರತೆಗೆ ಅರಿವಳಿಕೆ ನೀಡಿ ಕೊನೆಗೂ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.